ಮಳೆಯಾದರೆ 21 ನೇ ಶತಮಾನದ ಬೆಂಗಳೂರು ಎರಡು ಶತಮಾನಗಳ ಹಿಂದಿನ ಬೆಂದಕಾಳೂರು ಆಗುತ್ತದೆ!
ಮನೆಯ ಮಾಲೀಕರು ಸದರಿ ಕಾಲೊನಿಯ ಸುಮಾರು ನೂರು ಮನೆಗಳಲ್ಲಿ ಇದೇ ಸ್ಥಿತಿ ಎಂದು ಹೇಳುತ್ತಾರೆ. ಸಮಸ್ಯೆಯನ್ನು ತಮ್ಮ ಭಾಗದ ಶಾಸಕ ಮತ್ತು ಮೊದಲಿದ್ದ ಕಾರ್ಪೋರೇಟರ್ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಅಂತ ಅವರು ಹೇಳುತ್ತಾರೆ.
ಬೆಂಗಳೂರಿನಲ್ಲಿ ಮಳೆ ಅಗುತ್ತಿರುವ ಸಮಸ್ಯೆಗಳ ಬಗ್ಗೆ ನಾವು ನಿಮಗೆ ವಿವರಿಸುತ್ತಲೇ ಇದ್ದೇವೆ. ರಸ್ತೆ ಮತ್ತು ಜನವಸತಿ ಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ನಗರದ ಪ್ರತಿಯೊಂದು ರಸ್ತೆಯಲ್ಲಿ ಅಪಾಯಕಾರಿ ಗುಂಡಿಗಳು. ಕೆಲವು ಗುಂಡಿಗಳು ಅದೆಷ್ಟು ಆಳವಾಗಿವೆ ಎಂದರೆ, ಅಕಸ್ಮಾತ್ ನಮ್ಮ ದ್ವಿಚಕ್ರ ವಾಹನವೇನಾದರೂ ಗುಂಡಿಗಿಳಿದರೆ ವಾಹನ ಬಿಡಿ ನಿಮ್ಮ ಸೊಂಟ ರಿಪೇರಿಯಾಗಲು ಒಂದು ತಿಂಗಳು ಬೇಕಾಗುತ್ತದೆ. ವಿದ್ಯಾರಣ್ಯಪುರ ನಗರದ ಪೋಶ್ ಏರಿಯಾಗಳಲ್ಲಿ ಒಂದು ಹೇಳುತ್ತಾರೆ. ಆದರೆ ಇಲ್ಲಿನ ಮೂಲಭೂತ ಸೌಕರ್ಯಗಳು ಜನಪ್ರತಿನಿಧಿಗಳ ಮತ್ತು ಅವರ ಚೇಲಾಗಳಂತೆ ಆಡುವ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಯೋಗ್ಯತೆಗೆ ಕನ್ನಡಿ ಹಿಡಿದಂತಿವೆ. ಟಿವಿ9 ವರದಿಗಾರ ಪ್ರಜ್ವಲ್ ಸೋಮವಾರ ಬೆಳಗ್ಗೆ ವಿದ್ಯಾರಣ್ಯಪುರದಲ್ಲಿನ ಸ್ಥಿತಿಯ ಒಂದು ಚಿತ್ರಣವನ್ನು ನೀಡಿದ್ದಾರೆ.
ಈ ಮನೆಯ ಸ್ಥಿತಿ ನೋಡಿ. ರವಿವಾರ ಸುರಿದ ಮಳೆಗೆ ಚರಂಡಿಗಳಲ್ಲಿ ಹರಿದು ಹೋಗಬೇಕಿದ್ದ ನೀರು ಮನೆಯೊಳಗೆ ನುಗ್ಗಿದೆ, ಇದು ಕೊಳಚೆ ನೀರು ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೆ? ಮನೆಯ ಅಂಗಳ ಅಥವಾ ಹಾಲ್ನೊಳಗೆ ನೀರು ಬಂದಿದ್ದರೆ ಹೇಗೋ ನಿಭಾಯಿಸಬಹುದಿತ್ತು.
ಆದರೆ, ನಿಮಗೆ ಕಾಣುತ್ತಿರುವ ಹಾಗೆ ಮನೆಯ ಪ್ರತಿಯೊಂದು ಕೋಣೆಗೆ ನೀರು ನುಗ್ಗಿದೆ. ಮನೆಯೊಳಗಿನ ವಸ್ತುಗಳನ್ನು ನೆನೆಯದಂತಿರಲು ಮಂಚ, ಟೇಬಲ್, ಕಿಚನ್ ಕಟ್ಟೆ ಮೊದಲಾದ ಎತ್ತ್ತರದ ಪ್ರದೇಶಗಳಲ್ಲಿ ಎತ್ತಿಟ್ಟಿದ್ದಾರೆ.
ಮನೆಯ ಮಾಲೀಕರು ಸದರಿ ಕಾಲೊನಿಯ ಸುಮಾರು ನೂರು ಮನೆಗಳಲ್ಲಿ ಇದೇ ಸ್ಥಿತಿ ಎಂದು ಹೇಳುತ್ತಾರೆ. ಸಮಸ್ಯೆಯನ್ನು ತಮ್ಮ ಭಾಗದ ಶಾಸಕ ಮತ್ತು ಮೊದಲಿದ್ದ ಕಾರ್ಪೋರೇಟರ್ (ಈಗ ಬಿಬಿಎಮ್ಪಿ ವಿಸರ್ಜಿತಗೊಂಡಿದೆ) ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಅಂತ ಅವರು ಹೇಳುತ್ತಾರೆ.
ರಾತ್ರಿಯಿಡೀ ಜಾಗರಣೆ ಮಾಡಿರುವ ಕುಟುಂಬದವರು, ಮಳೆ ಸುರಿಯುವುದು ನಿಂತ ನಂತರ ನೀರು ಹೊರ ಹಾಕುವ ಯೋಚನೆಯಲ್ಲಿದ್ದಾರೆ.
ಇದನ್ನೂ ಓದಿ: Viral Video: ಮೊಬೈಲ್ನಲ್ಲಿ ವಿಡಿಯೊ ನೋಡ್ತಾ ಕುಳಿತಿದ್ದ ಮೂರು ಕೋತಿಗಳ ರಿಯಾಕ್ಷನ್ ವೈರಲ್; ವಿಡಿಯೊ ಮಜವಾಗಿದೆ ನೋಡಿ