ಮಹಾರಾಣಿ ಕ್ಲಸ್ಟರ್ ಕಾಲೇಜು ಆವರಣದಲ್ಲಿ ಅಪಘಾತ; ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

| Updated By: ಆಯೇಷಾ ಬಾನು

Updated on: Oct 07, 2023 | 12:34 PM

ಮಹಾರಾಣಿ ಕ್ಲಸ್ಟರ್ ಕಾಲೇಜು ಆವರಣದಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿವೆ. ಕಾಲೇಜು ಕ್ಯಾಂಪಸ್​ನಲ್ಲೇ ಓವರ್ ಸ್ಪೀಡ್ ನಲ್ಲಿ ಕಾರು ಚಲಾಯಿಸುತ್ತಿದ್ದ ಇಂಗ್ಲಿಷ್ ಪ್ರೊ.ನಾಗರಾಜ್‌, ಇಬ್ಬರು ವಿದ್ಯಾರ್ಥಿನಿಯರು ಮತ್ತು ಮ್ಯೂಸಿಕ್ ಟೀಚರ್‌ಗೆ ಡಿಕ್ಕಿ ಹೊಡೆದಿದ್ದಾರೆ.

ಬೆಂಗಳೂರು, ಅ.07: ನಗರದ ಪ್ರತಿಷ್ಠಿತ ಮಹಾರಾಣಿ ಕ್ಲಸ್ಟರ್ ಕಾಲೇಜು (Maharani Cluster University) ಆವರಣದಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ವಿದ್ಯಾರ್ಥಿನಿಯರು (Students) ಹಾಗೂ ಮ್ಯೂಸಿಕ್ ಟೀಚರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಕಾಲೇಜು ಕ್ಯಾಂಪಸ್​ನಲ್ಲೇ ಓವರ್ ಸ್ಪೀಡ್ ನಲ್ಲಿ ಕಾರು ಚಲಾಯಿಸುತ್ತಿದ್ದ ಇಂಗ್ಲಿಷ್ ಪ್ರೊ.ನಾಗರಾಜ್‌, ಇಬ್ಬರು ವಿದ್ಯಾರ್ಥಿನಿಯರು ಮತ್ತು ಮ್ಯೂಸಿಕ್ ಟೀಚರ್‌ಗೆ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಬಿಕಾಂ ವಿದ್ಯಾರ್ಥಿ ಅಶ್ವಿನಿ, ಮತ್ತೊಬ್ಬ ವಿದ್ಯಾರ್ಥಿನಿ ನಂದುಪ್ರಿಯಾಗೆ ಗಂಭೀರ ಗಾಯಗಳಾಗಿವೆ. ಹಾಗೂ ಮ್ಯೂಸಿಕ್ ಟೀಚರ್ ಜ್ಯೋತಿಗೂ ಗಾಯಗಳಾಗಿವೆ. ಓವರ್‌ಸ್ಪೀಡ್‌ನಿಂದ ಕಾರು ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.

ಸದ್ಯ ಗಾಯಾಳುಗಳನ್ನು ಸೆಂಟ್ ಮಾರ್ಥಾಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಾವುದೇ ಆತಂಕವಿಲ್ಲ, ಚಿಕಿತ್ಸೆಗೆ ವಿದ್ಯಾರ್ಥಿನಿಯರು ಸ್ವಂದಿಸುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಗಾಯಾಳು ಅಶ್ವಿನಿ ಗಂಗಾವತಿ ಮೂಲದವರಾಗಿದ್ದು ಆರ್.ಟಿ. ನಗರದ ಪಿಜಿಯಲ್ಲಿ ವಾಸವಿದ್ರು. ಮಹಾರಾಣಿ ಕಾಲೇಜು ಕ್ಯಾಂಪಸ್‌ನಲ್ಲಿ ಬೆಳಗ್ಗೆ 9.35ರ ಸುಮಾರಿಗೆ ಅಪಘಾತ ಸಂಭವಿಸಿದೆ. ಪ್ರೊಫೆಸರ್‌ ಚಲಾಯಿಸುತ್ತಿದ್ದ ಸ್ವಿಫ್ಟ್‌ ಕಾರು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ಪ್ರೊ.ನಾಗರಾಜ್‌ ವೇಗವಾಗಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ

ಇನ್ನು ಅಪಘಾತ ಸಂಬಂಧ ಪ್ರತಿಕ್ರಿಯೆ ನೀಡಿದ ಮಹಾರಾಣಿ ಕ್ಲಸ್ಟರ್​ ವಿವಿ ಸಿಂಡಿಕೇಟ್​ ಸದಸ್ಯ ಚಿಕ್ಕಮುನಿಯಪ್ಪ, ಪ್ರೊ.ನಾಗರಾಜ್‌ ವೇಗವಾಗಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ. ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾದರೂ ಸ್ಥಳಕ್ಕೆ ಕುಲಪತಿ ಆಗಮಿಸಿಲ್ಲ ಎಂದು ಕುಲಪತಿ ಗೋಮತಿ ದೇವಿ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರೊ.ಹೆಚ್​.ನಾಗರಾಜ್​ ಕ್ಯಾಂಪಸ್​ನಲ್ಲಿ ವೇಗವಾಗಿ ಕಾರು ಚಲಾಯಿಸಿದ್ದಾರೆ. ಕಂಟ್ರೋಲ್​ ಸಿಗದೆ ಪಾರ್ಕಿಂಗ್​ನಲ್ಲಿದ್ದ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಈ ವೇಳೆ ನಡೆದುಕೊಂಡು ಬರುತ್ತಿದ್ದ ಮೂವರಿಗೆ ಗಾಯವಾಗಿದೆ ಎಂದು ಚಿಕ್ಕಮುನಿಯಪ್ಪ ಅವರು ತಿಳಿಸಿದರು.

ಇದನ್ನೂ ಓದಿ: ಮಹಾರಾಣಿ‌ ಕ್ಲಸ್ಟರ್ ಯೂನಿವರ್ಸಿಟಿಯಲ್ಲಿ “ಟೆಕ್ ವಿಸ್ತಾರ” ಆಯೋಜನೆ, ಗಮನ ಸೆಳೆದ ಎಐ ರೋಬೋ‌

ಚಿಕಿತ್ಸೆ ವೆಚ್ಚವನ್ನ ವಿವಿ ನೋಡಿಕೊಳ್ಳುತ್ತೆ

ಮಹರಾಣಿ ವಿವಿ ಪ್ರಿನ್ಸಿಪಾಲ್ ಡಾ. ಹೆಚ್, ಪ್ರಕಾಶ್ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಿಗ್ಗೆ 9:30 ರ ವೇಳೆ ಈ ಘಟನೆ ನಡೆದಿಎ. ಇಬ್ಬರು ವಿದ್ಯಾರ್ಥಿನಿಯರಿಗೆ ಹೆಚ್ಚು ಗಾಯವಾಗಿದೆ. ಸಂಗೀತ ಉಪನ್ಯಾಸಕಿ ಜ್ಯೋತಿ ಎಂಬುವರಿಗೆ ಕೂಡಾ ಗಾಯವಾಗಿದೆ. ಅಪಘಾತಕ್ಕೆ ಒಳಗಾದ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕಿಯ ಸಂಪೂರ್ಣ ಚಿಕಿತ್ಸಾ ವೆಚ್ಚಾವನ್ನು ವಿವಿ ನೋಡಿಕೊಳ್ಳುತ್ತೆ ಎಂದು ಡಾ. ಹೆಚ್, ಪ್ರಕಾಶ್ ತಿಳಿಸಿದರು.

ಆಸ್ಪತ್ರೆಗೆ ವಿಸಿ ಭೇಟಿ

ಗಾಯಾಳು ಅಶ್ವಿನಿ ತಂದೆ ಅಮರೇಶ್ ಟಿವಿ9 ಜೊತೆ ಘಟನೆ ಸಂಬಂಧ ಮಾತನಾಡಿದ್ದಾರೆ. ನನಗೆ ಬೆಳಗ್ಗೆ 10 ಗಂಟೆಯ ಸುಮಾರಿಗೆ ಆಕೆಯ ಸ್ನೇಹಿತೆಯರು ಕಾಲ್ ಮಾಡಿದ್ರು. ಕಾಲೇಜಿನವರು ಯಾವುದೇ ಅಪಾಯವಿಲ್ಲ ಅಂತ ಹೇಳಿದ್ದಾರೆ ಇನ್ನೂ‌ ವೈದ್ಯರು ಮಾತನಾಡಿಲ್ಲ. ನಾನು ಇನ್ನೂ ಹೋಗಿ ಮಾತನಾಡಿಲ್ಲ ಎಂದರು. ಮತ್ತೊಂದೆಡೆ ಇಬ್ಬರು ವಿದ್ಯಾರ್ಥಿನಿಯರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಅಶ್ವಿನಿ ಕಾಲಿಗೆ ತೀವ್ರ ಗಾಯಗಳಾಗಿರುವ ಕಾರಣ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲು ತಯಾರಿ ನಡೆದಿದೆ. ಆಸ್ಪತ್ರೆಗೆ ಮಹಾರಾಣಿ‌ ಕ್ಲಸ್ಟರ್ ವಿವಿಯ ವಿಸಿ ಗೋಮತಿ ದೇವಿ ಭೇಟಿ ನೀಡಿ ವೈದ್ಯರ ಬಳಿ ಮಾಹಿತಿ ಪಡೆದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published on: Oct 07, 2023 11:14 AM