ಬೆಂಗಳೂರಲ್ಲಿ ಭೀಕರ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
ಮುಖ್ಯಾಂಶಗಳು
- ಬೆಂಗಳೂರಿನ ರಾಜಾಜಿನಗರದಲ್ಲಿ ಭೀಕರ ಸರಣಿ ಕೊಲೆ ಕೇಸ್
- ತಮಿಳುನಾಡಿನ ಸೇಲಂ ಎರಕ್ಕಾಡು ಪ್ರದೇಶದಲ್ಲಿ ಎರಡು ಶವಪತ್ತೆ
- ಇದುವರೆಗೆ ಹತ್ಯೆಯಾಗಿರುವ ಮೂವರು ಮೃತದೇಹಗಳು ಪತ್ತೆ
ಬೆಂಗಳೂರು ಸಾಮೂಹಿಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಲಂನ ಎರಕ್ಕಾಡು ಪ್ರದೇಶದಲ್ಲಿ ಇಂದುಶೇಖರ್ ಪತ್ನಿ ಸುನಿತಾ ಮತ್ತು ಅತ್ತೆ ರೂಪಲತಾ ಅವರ ಮೃತದೇಹಗಳು ಪತ್ತೆಯಾಗಿವೆ. ಈ ಮೊದಲು ನಂದಿಬೆಟ್ಟದ ಬಳಿ ಬಾಲಕ ಪುನೀತ್ ಮೃತದೇಹ ಪತ್ತೆಯಾಗಿತ್ತು. ಇದರೊಂದಿಗೆ ಒಟ್ಟು ಮೂರು ಮೃತದೇಹಗಳು ಪತ್ತೆಯಾದಂತಾಗಿದೆ. ಉಳಿದ ನಾಲ್ಕು ಮೃತದೇಹಗಳಿಗಾಗಿ ಪೊಲೀಸರ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಬೆಂಗಳೂರು, ನವೆಂಬರ್ 07: ಬೆಂಗಳೂರಿನ ರಾಜಾಜಿನಗರದಲ್ಲಿ ಭೀಕರ ಸರಣಿ ಕೊಲೆ ಕೇಸ್ನಲ್ಲಿ ಪ್ರಮುಖ ಬೆಳೆವಣಿಯೊಂದು ನಡೆದಿದೆ. ತಮಿಳುನಾಡಿನ ಸೇಲಂ ಎರಕ್ಕಾಡು ಪ್ರದೇಶದಲ್ಲಿ ಮತ್ತೆ ಎರಡು ಶವ ಪತ್ತೆ ಆಗಿವೆ. ಇಂದುಶೇಖರ್ ಪತ್ನಿ ಸುನಿತಾ ಮತ್ತು ಅತ್ತೆ ರೂಪವತಿ ಶವ ಎಂದು ಗುರುತಿಸಲಾಗಿದೆ. ಆ ಮೂಲಕ ಇದುವರೆಗೆ ಹತ್ಯೆಯಾಗಿರುವ ಮೂವರು ಮೃತದೇಹಗಳು ಪತ್ತೆ ಆಗಿವೆ. ಇದಕ್ಕೂ ಮೊದಲು, ಬಾಲಕ ಪುನೀತ್‌ನ ಮೃತದೇಹವು ನಂದಿಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿತ್ತು. ಇನ್ನುಳಿದ ನಾಲ್ಕು ಮೃತದೇಹಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸದ್ಯ ಪತ್ತೆಯಾಗಿರುವ ಮೃತದೇಹಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿ, ಕೈ ಕಾಲುಗಳನ್ನು ಮುರಿದು ಸೆಲ್ಲೋಟೇಪ್ ಸುತ್ತಿರುವುದು ಬೆಳಕಿಗೆ ಬಂದಿದೆ. ದುರ್ವಾಸನೆ ಬಾರದಂತೆ ರೋಸ್ ವಾಟರ್ ಸಿಂಪಡಿಸಿರುವುದು ಕೂಡಾ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
