Bengaluru: ಗೋಡೆಗಳ ಮೇಲೆ ಕಮಲದ ಪೇಂಟಿಂಗ್ ಮಾಡಿ ಯಡವಟ್ಟು ಮಾಡಿಕೊಂಡ ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸಂಸದ ತೇಜಸ್ವಿ ಸೂರ್ಯ ಗೋಡೆಗಳ ಮೇಲೆ ಕಮಲದ ಪೇಂಟಿಂಗ್ ಮಾಡುವ ಮೂಲಕ ಮತ್ತೊಂದು ವಿವಾದವನ್ನ ಸೃಷ್ಟಿಸಿದ್ದಾರೆ.
ಬೆಂಗಳೂರು: ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸಂಸದ ತೇಜಸ್ವಿ ಸೂರ್ಯ ಗೋಡೆಗಳ ಮೇಲೆ ಕಮಲದ ಪೇಂಟಿಂಗ್ ಮಾಡಿದ್ದಾರೆ. ಪೇಂಟಿಂಗ್ ಮಾಡಿದ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ಗೋಡೆಗಳಲ್ಲಿ ಪೇಂಟಿಂಗ್ ಮಾಡುವ ಮೂಲಕ ಬಿಬಿಎಂಪಿ ನಿಯಮ ಉಲ್ಲಂಘನೆ ಮಾಡಿದ್ರಾ..? ಎಂದು ಚರ್ಚೆ ಶುರುವಾಗಿದೆ. ಇನ್ನು ಬೆಂಗಳೂರು ನವ ನಿರ್ಮಾಣ ಪಕ್ಷ ಸಾರ್ವಜನಿಕ ಸ್ಥಳಗಳಲ್ಲಿನ ಗೋಡೆ ಮೇಲೆ ಚಿತ್ರ ಬಿಡಿಸೋದು ಅಪರಾಧ. ಹೈಕೋರ್ಟ್ ಆದೇಶವನ್ನ ಉಲ್ಲಂಘನೆ ಮಾಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿದೆ. ಸಂಸದರ ವಿರುದ್ಧ ಸೂಕ್ತ ಕ್ರಮಕ್ಕೆ ಬೆಂಗಳೂರು ನವ ನಿರ್ಮಾಣ ಪಕ್ಷ ಆಗ್ರಹಿಸಿದ್ದಾರೆ. ಇತ್ತ ಬಿಬಿಎಂಪಿಯಿಂದ ಸಂಸದರ ವಿರುದ್ದ ಸುಮೋಟೋ ಕೇಸ್ ಹಾಕುವ ಎಚ್ಚರಿಕೆ ನೀಡಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
