ರಾಮನಗರ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿಟಿ ಶ್ರೀಧರ್ (BT Sridhar) ಇಂದು ರಾಮನಗರದಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸುವಾಗ ಮಾಧ್ಯಮದವರು ಕೇಳಿದ ಕೆಲ ತೀಕ್ಷ್ಣ ಪ್ರಶ್ನೆಗಳಿಗೆ ನಿರುತ್ತರಾದರು ಮತ್ತು ಉತ್ತರ ತೋಚದೆ ತಬ್ಬಿಬ್ಬಾದರು. ನಿನ್ನೆ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಿಸುವಾಗ (toll collection) ಅಷ್ಟೆಲ್ಲ ಗಲಾಟೆಗಳಾದರೂ ನೀವು ಸುದ್ದಿಗೋಷ್ಟಿ ನಡೆಸಿ ಜನರ ಗೊಂದಲಗಳನ್ನು ಪರಿಹರಿಸುವ ಪ್ರಯತ್ನ ಯಾಕೆ ಮಾಡಲಿಲ್ಲ ಅಂತ ಪತ್ರಕರ್ತರು ಕೇಳಿದಾಗ ಶ್ರೀದರ್ ಆರೋಗ್ಯದ ಸಮಸ್ಯೆಗಳನ್ನು (health issues) ಹೇಳಿಕೊಂಡರು. ಹಾಗಾದರೆ ಇವತ್ಯಾಕೆ ಪ್ರೆಸ್ಸರ್ ನಡೆಸುತ್ತಿದ್ದೀರಿ ಅಂತ ಕೇಳಿದಾಗ ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದರಿಂದ ನಡೆಸಬೇಕಾಗಿದೆ ಅಂತ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ