ಬೆಂಗಳೂರು: ಪ್ಯಾಕೆಟ್ ಜ್ಯೂಸ್ ಕುಡಿದು ಮಗು ಅಸ್ವಸ್ಥ, ಜ್ಯೂಸ್​ನಲ್ಲಿ ಕಪ್ಪು ಮಿಶ್ರಣ ಪತ್ತೆ

ಬೆಂಗಳೂರು: ಪ್ಯಾಕೆಟ್ ಜ್ಯೂಸ್ ಕುಡಿದು ಮಗು ಅಸ್ವಸ್ಥ, ಜ್ಯೂಸ್​ನಲ್ಲಿ ಕಪ್ಪು ಮಿಶ್ರಣ ಪತ್ತೆ

ಆಯೇಷಾ ಬಾನು
|

Updated on: May 29, 2024 | 8:45 AM

ಶ್ರೀರಾಂಪುರದಲ್ಲಿ ಮಗುವೊಂದು ಪ್ಯಾಕೆಟ್ ಜ್ಯೂಸ್ ಕುಡಿದು ಅಸ್ವಸ್ಥಗೊಂಡಿದೆ. ಪೋಷಕರು ಪ್ಯಾಕೆಟ್ ಪರಿಶೀಲಿಸಿದ್ದು ತಂಪು ಪಾನೀಯದ ಪ್ಯಾಕೆಟ್​​ನಲ್ಲಿ ಕಪ್ಪು ಬಣ್ಣ ಮಿಶ್ರಿಣ ವಸ್ತುವೊಂದು ಸಿಕ್ಕಿದೆ. ಘಟನೆ ಸಂಬಂಧದ ವಿಡಿಯೋ ವೈರಲ್ ಆಗಿದೆ. ತಂಪು ಪಾನೀಯ ಗುಣಮಟ್ಟ ಪರೀಕ್ಷೆಗೆ ಫುಡ್ ಡಿಪಾರ್ಟ್​​ಮೆಂಟ್​ಗೆ ರವಾನಿಸಲಾಗಿದೆ.

ಬೆಂಗಳೂರು, ಮೇ.29: ಬೆಂಗಳೂರಿನಲ್ಲಿ ತಂಪು ಪಾನೀಯ ಕುಡಿದು ಮಗು ಅಸ್ವಸ್ಥ ಕೊಂಡಿರುವ ಆರೋಪ ಕೇಳಿಬಂದಿದೆ. ಶ್ರೀರಾಂಪುರದಲ್ಲಿ ಮಗುವೊಂದು ಪ್ಯಾಕೆಟ್ ಜ್ಯೂಸ್ (Packed Juice) ಕುಡಿದು ಅಸ್ವಸ್ಥಗೊಂಡಿದೆ. ಪೋಷಕರು ಪ್ಯಾಕೆಟ್ ಪರಿಶೀಲಿಸಿದ್ದು ತಂಪು ಪಾನೀಯದ ಪ್ಯಾಕೆಟ್​​ನಲ್ಲಿ ಕಪ್ಪು ಬಣ್ಣ ಮಿಶ್ರಿಣ ವಸ್ತುವೊಂದು ಸಿಕ್ಕಿದೆ. ಘಟನೆ ಸಂಬಂಧದ ವಿಡಿಯೋ ವೈರಲ್ (Video Viral) ಆಗಿದೆ.

ಇನ್ನು ಪ್ಯಾಕೆಟ್​ನಲ್ಲಿ ಸಿಕ್ಕ ಕಪ್ಪು ಬಣ್ಣದ ಮಿಶ್ರಣದಿಂದಲೇ ಮಗು ಅಸ್ವಸ್ಥವಾಗಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಗು ಚೇತರಿಸಿಕೊಂಡಿದೆ. ಘಟನೆ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಂಪು ಪಾನೀಯ ಗುಣಮಟ್ಟ ಪರೀಕ್ಷೆಗೆ ಫುಡ್ ಡಿಪಾರ್ಟ್​​ಮೆಂಟ್​ಗೆ ರವಾನಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ