ಶೋಭಾ ಕರಂದ್ಲಾಜೆ ನನ್ನನ್ನು ಸಭೆಗಳಿಗೆ ಕರೆಯದೆ ಅವಮಾನಿಸುತ್ತಿದ್ದಾರೆ: ಎಸ್ ಟಿ ಸೋಮಶೇಖರ್, ಬಿಜೆಪಿ ಶಾಸಕ

|

Updated on: Apr 05, 2024 | 2:45 PM

ಶೋಭಾ ಅವರನ್ನು ಉಡುಪಿ-ಚಿಕ್ಕಮಗಳೂರಿನ ಜನತೆಯೇ ಗೋಬ್ಯಾಕ್ ಅಂತ ಹೇಳಿದ ಮೇಲೆ ಬೆಂಗಳೂರು ಉತ್ತರ ಕ್ಷೇತ್ರದ ಜನ ಯಾಕೆ ಅವರನ್ನು ಸ್ವಾಗತಿಸಿಯಾರು? ಎಂದು ಸೋಮಶೇಖರ್ ಪ್ರಶ್ನಿಸಿದರು. ಕ್ಷೇತ್ರದ ಹಿಂದಿನ ಸಂಸದರಾದ ಡಿಬಿ ಚಂದ್ರೇಗೌಡ ಮತ್ತು ಡಿವಿ ಸದಾನಂದ ಗೌಡ ಅವರ ಹಾಗೆ ಶೋಭಾ ಡಿಗ್ನಿಫೈಡ್ ಆಗಿ ನಡೆದುಕೊಳ್ಳದೆ ಕಾರ್ಯಕರ್ತರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಸೋಮಶೇಖರ್ ಹೇಳಿದರು.

ಬೆಂಗಳೂರು: ಯಶವಂತಪುರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (ST Somashekhar) ತಮ್ಮ ಬಂಡಾಯ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾದ ಬಳಿಕ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಅವರು, ಬೆಂಗಳೂರು ಉತ್ತರ ಕ್ಷೇತ್ರದ (Bengaluru North constituency) ಬಿಜೆಪಿ ಅಭ್ಯರ್ಥಿಯಾಗಿರುವ ಶೋಭಾ ಕರಂದ್ಲಾಜೆ (Shobha Karandlaje) ಅವರು ತನ್ನನ್ನು ಸಂಪೂರ್ಣವಾಗಿ ಕಡೆಗಣಿಸಿ ಸಭೆಗಳನ್ನು ನಡೆಸುತ್ತಿದ್ದಾರೆ ಮತ್ತು ಪ್ರಚಾರಕ್ಕೆ ಕರೆಯುತ್ತಿಲ್ಲ, ತನಗಾಗುತ್ತಿರುವ ಅವಮಾನವನ್ನು ಕ್ಷೇತ್ರದ ಮತದಾರರಿಗೆ ತಿಳಿಸಿದ್ದೇನೆ, ಅವರು ಹೇಳಿದ ಹಾಗೆ ನಡೆದುಕೊಳ್ಳುತ್ತೇನೆ ಯಾಕೆಂದರೆ ತನಗೆ ಅವರೇ ಹೈಕಮಾಂಡ್ ಇದ್ದಂತೆ ಎಂದು ಸೋಮಶೇಖರ್ ಹೇಳಿದರು. ಶೋಭಾ ಅವರನ್ನು ಉಡುಪಿ-ಚಿಕ್ಕಮಗಳೂರಿನ ಜನತೆಯೇ ಗೋಬ್ಯಾಕ್ ಅಂತ ಹೇಳಿದ ಮೇಲೆ ಬೆಂಗಳೂರು ಉತ್ತರ ಕ್ಷೇತ್ರದ ಜನ ಯಾಕೆ ಅವರನ್ನು ಸ್ವಾಗತಿಸಿಯಾರು? ಎಂದು ಸೋಮಶೇಖರ್ ಪ್ರಶ್ನಿಸಿದರು. ಕ್ಷೇತ್ರದ ಹಿಂದಿನ ಸಂಸದರಾದ ಡಿಬಿ ಚಂದ್ರೇಗೌಡ ಮತ್ತು ಡಿವಿ ಸದಾನಂದ ಗೌಡ ಅವರ ಹಾಗೆ ಶೋಭಾ ಡಿಗ್ನಿಫೈಡ್ ಆಗಿ ನಡೆದುಕೊಳ್ಳದೆ ಕಾರ್ಯಕರ್ತರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಸೋಮಶೇಖರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶದಲ್ಲಿ ಎಸ್ ಟಿ ಸೋಮಶೇಖರ್ ಭುಜದಡವಿ ಆತ್ಮೀಯತೆ ಪ್ರದರ್ಶಿಸಿದ ಸಿದ್ದರಾಮಯ್ಯ

Follow us on