ಲೋಕಸಭಾ ಚುನಾವಣೆ ಕೇವಲ ಮಂಡ್ಯಕ್ಕೆ ಸೀಮಿತವಲ್ಲ, ವರಿಷ್ಠರು ಸೂಚಿಸಿದ ಕಡೆಯೆಲ್ಲ ಪ್ರಚಾರ ಮಾಡುತ್ತೇನೆ: ಸುಮಲತಾ ಅಂಬರೀಶ್

ಲೋಕಸಭಾ ಚುನಾವಣೆ ಕೇವಲ ಮಂಡ್ಯಕ್ಕೆ ಸೀಮಿತವಲ್ಲ, ವರಿಷ್ಠರು ಸೂಚಿಸಿದ ಕಡೆಯೆಲ್ಲ ಪ್ರಚಾರ ಮಾಡುತ್ತೇನೆ: ಸುಮಲತಾ ಅಂಬರೀಶ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 05, 2024 | 1:12 PM

ಲೋಕಸಭಾ ಚುವಾವಣೆ ಕೇವಲ ಮಂಡ್ಯ ಕ್ಷೇತ್ರದಲ್ಲಿ ಮಾತ್ರ ನಡೆಯುತ್ತಿಲ್ಲ ಎಂದು ನಗುತ್ತಾ ಹೇಳಿ, ಪಕ್ಷದ ವರಿಷ್ಠರು ಯಾವುದೇ ಕ್ಷೇತ್ರದಲ್ಲಿ ಪ್ರಚಾರ ಮಾಡುವಂತೆ ಹೇಳಿದರೂ ಅದನ್ನು ಮಾಡುತ್ತೇನೆ, ಬರೀ ಮಂಡ್ಯ ಮಾತ್ರವಲ್ಲ ಎಂದರು. ಇನ್ನು ಮುಂದೆ ತಾನು ಪಕ್ಷದ ಚೌಕಟ್ಟಿನೊಳಗೆ ಕೆಲಸ ಮಾಡಬೇಕಾಗುತ್ತದೆ ಎಂದು ಸುಮಲತಾ ಹೇಳಿದರು.

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ಪರ ಪ್ರಚಾರ ಮಾಡ್ತೀರಾ ಅಂತ ಕೇಳಿದಾಗ ಸುಮಲತಾ ಅಂಬರೀಶ್ (Sumalatha Ambareesh) ಯಾವುದನ್ನೂ ಸ್ಪಷ್ಟವಾಗಿ ಹೇಳಲಿಲ್ಲ. ಪಾರ್ಟಿ ಹೇಳಿದ್ದನ್ನು ಮಾಡುತ್ತೇನೆ ಅಂತ ಹೇಳಿ ವಿಷಯವನ್ನು ಬಿಜೆಪಿ ವರಿಷ್ಠರ (party high command) ಮೇಲೆ ಜಾರಿಸುತ್ತಾರೆ. ಇಂದು ಬಿಜೆಪಿಯನ್ನು ಸೇರುವ ಮುನ್ನ ತಮ್ಮ ಪತಿ ಅಂಬರೀಶ್ ಅವರ ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಅದೇ ಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಲೋಕಸಭಾ ಚುವಾವಣೆ ಕೇವಲ ಮಂಡ್ಯ ಕ್ಷೇತ್ರದಲ್ಲಿ ಮಾತ್ರ ನಡೆಯುತ್ತಿಲ್ಲ ಎಂದು ನಗುತ್ತಾ ಹೇಳಿ, ಪಕ್ಷದ ವರಿಷ್ಠರು ಯಾವುದೇ ಕ್ಷೇತ್ರದಲ್ಲಿ ಪ್ರಚಾರ ಮಾಡುವಂತೆ ಹೇಳಿದರೂ ಅದನ್ನು ಮಾಡುತ್ತೇನೆ, ಬರೀ ಮಂಡ್ಯ ಮಾತ್ರವಲ್ಲ ಎಂದರು. ಇನ್ನು ಮುಂದೆ ತಾನು ಪಕ್ಷದ ಚೌಕಟ್ಟಿನೊಳಗೆ ಕೆಲಸ ಮಾಡಬೇಕಾಗುತ್ತದೆ, ಅಲ್ಲಿ ಕಾರ್ಯಕರ್ತರು ಮತ್ತು ಮುಖಂಡರಿರುತ್ತಾರೆ, ಎಲ್ಲರೊಂದಿಗೆ ಜೊತೆಗೂಡಿ ಕೆಲಸ ಮಾಡುವುದಾಗಿ ಸುಮಲತಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಲೋಕಸಭಾ ಚುನಾವಣೆ 2024: ಕುಮಾರಸ್ವಾಮಿ ಗೆದ್ದರೆ ಸಚಿವರಾಗುತ್ತಾರೆ, ಹೀಗಾಗಿ ಹೆಚ್​ಡಿಕೆಗೆ ಮತ ಹಾಕಿ: ಜೆಡಿಎಸ್​ ಮುಖಂಡರಿಂದ ಪ್ರಚಾರ