ಕಮಲ ಮುಡಿದ ಮಂಡ್ಯ ಸಂಸದೆ: ಸುಮಲತಾಗೆ ದರ್ಶನ, ಯಶ್​ ಜೋಡೆತ್ತು ಬೆಂಬಲ ಸಿಗುತ್ತಾ?

ಕಮಲ ಮುಡಿದ ಮಂಡ್ಯ ಸಂಸದೆ: ಸುಮಲತಾಗೆ ದರ್ಶನ, ಯಶ್​ ಜೋಡೆತ್ತು ಬೆಂಬಲ ಸಿಗುತ್ತಾ?

ಕಿರಣ್​ ಹನಿಯಡ್ಕ
| Updated By: ಗಂಗಾಧರ​ ಬ. ಸಾಬೋಜಿ

Updated on:Apr 05, 2024 | 3:00 PM

ಬಿಜೆಪಿಗೆ ಸೇರಿದ ಮೇಲೂ ಯಶ್ ಮತ್ತು ದರ್ಶನ ಅವರ ಬೆಂಬಲ ಇರುತ್ತಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಅಂಬರೀಶ್​, ‘ನಾನು ಚುನಾವಣಾ ಕಣದಲ್ಲಿ ಇಲ್ಲದಿರುವುದಕ್ಕೆ ಇದು ಅಪ್ರಸ್ತುತ. ದರ್ಶನಗೆ ಪಕ್ಷ ಮುಖ್ಯವಲ್ಲ. ನಮ್ಮ ಮನೆ ಮಗನಾಗಿ ಅವರು ಬರುತ್ತಾರೆ’ ಎಂದು ಹೇಳಿದ್ದಾರೆ. 

ಬೆಂಗಳೂರು, ಏಪ್ರಿಲ್​ 05: ಮಂಡ್ಯ ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಹಾಗೂ ನಮ್ಮೆಲ್ಲರ ನೆಚ್ಚಿನ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿ ಎನ್ನುವ ಆಶಯದೊಂದಿಗೆ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh)​ ಅವರು ಇತ್ತೀಚೆಗೆ ಬಿಜೆಪಿಗೆ ಬೆಂಬಲಿಸುವುದಾಗಿ ಘೋಷಿಸಿದ್ದರು. ಇದೀಗ ಇಂದು ಬಿಜೆಪಿ ನಾಯಕರ ಸಮ್ಮುಖದಲ್ಲಿ ಬಿಜೆಪಿಯನ್ನು ಸೇರ್ಪಡೆ ಆಗಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಭರ್ಜರಿ ಗೆಲುವು ಸಾಧಿಸಿದ್ದರು. ಆಗ ಅವರ ಬೆಂಬಲಕ್ಕೆ ಅಂತ ನಿಂತುಕೊಂಡಿದ್ದು ಕನ್ನಡ ಚಿತ್ರರಂಗದ ಜೋಡೆತ್ತುಗಳು ಎಂದು ಕರೆಯುವ ಚಾಲೆಂಜಿಗ್​ ಸ್ಟಾರ್​ ದರ್ಶನ ಮತ್ತು ರಾಕಿಂಗ್​ ಸ್ಟಾರ್​​ ಯಶ್​. ಇದೀಗ ರಾಷ್ಟ್ರೀಯ ಪಕ್ಷ ಬಿಜೆಪಿಯನ್ನು ಸೇರ್ಪಡೆ ಬಳಿಕ ಅವರು ಪ್ರಚಾರಕ್ಕೆ ಬರುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ‘ನಾನು ಚುನಾವಣಾ ಕಣದಲ್ಲಿ ಇಲ್ಲದಿರುವುದಕ್ಕೆ ಇದು ಅಪ್ರಸ್ತುತ. ದರ್ಶನಗೆ ಪಕ್ಷ ಮುಖ್ಯವಲ್ಲ. ನಮ್ಮ ಮನೆ ಮಗನಾಗಿ ಅವರು ಬರುತ್ತಾರೆ’ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published on: Apr 05, 2024 02:55 PM