ಅಮ್ಮನ ಎಲ್ಲ ನಿರ್ಧಾರಗಳನ್ನು ಬೆಂಬಲಿಸುತ್ತೇನೆ, 5 ವರ್ಷಗಳ ಹಿಂದೆ ನಡೆದಿದ್ದು ಕೌಟುಂಬಿಕ ಕಲಹವಲ್ಲ: ಅಭಿಷೇಕ್ ಅಂಬರೀಶ್
ಕುಮಾರಸ್ವಾಮಿಯವರ ಪ್ರಚಾರ ಮಾಡುವ ಬಗ್ಗೆ ಕೇಳಿದಾಗ ಸಿಡುಕಿದ ಅಭಿಷೇಕ್, 5 ವರ್ಷಗಳ ಹಿಂದೆ ನಡೆದಿದ್ದು ಕೌಟುಂಬಿಕ ಕಲಹವೇನಲ್ಲ, ರಾಜಕೀಯದಲ್ಲಿ ಅಂಥ ಸಂಗತಿಗಳೆಲ್ಲ ನಡೆಯುತ್ತಿರುತ್ತವೆ, ಇಲ್ಲಿ ಯಾರೂ ವೈರಿಗಳಲ್ಲ ಸ್ನೇಹಿತರೂ ಅಲ್ಲ, ಕುಮಾರಸ್ವಾಮಿಯರು ಮನೆಗೂ ಬಂದಿದ್ದರು, ದೇಶಕ್ಕೆ ಮತ್ತು ಜಿಲ್ಲೆಗೆ ಒಳ್ಳೆಯದಾಗಬೇಕು ಅನ್ನೋದಷ್ಟೇ ತಮ್ಮ ಉದ್ದೇಶ ಎಂದರು.
ಬೆಂಗಳೂರು: ಏಪ್ರಿಲ್ 3 ರಂದು ಮಂಡ್ಯದಲ್ಲಿ ಸುಮಲತಾ ಅಂಬರೀಶ್ (Sumalatha Ambareesh) ಬಿಜೆಪಿ ಸೇರುವ ಘೋಷಣೆ ಮಾಡಿದಾಗ ಅವರ ಪಕ್ಕದಲ್ಲೇ ನಿಂತಿದ್ದ ಮಗ ಅಭಿಷೇಕ್ ಅಂಬರೀಶ್ (Abhishek Ambareesh) ಮತ್ತು ಸಂಸದೆಯನ್ನು ಸ್ವಂತ ತಾಯಿಯಷ್ಟೇ ಗೌರವಿಸುವ ನಟ ದರ್ಶನ್ (actor Darshan) ಸಂತಸ ವ್ಯಕ್ತಪಡಿಸದೆ ಸ್ಥಿತಪ್ರಜ್ಞರಂತಿದ್ದರು. ಆದರೆ ಇಂದು ನಗರದಲ್ಲಿ ಅವರು ಟಿವಿ9 ವರದಿಗಾರ್ತಿಗೆ ನೀಡಿದ ಪ್ರತಿಕ್ರಿಯೆ ಕೇಳಿದರೆ ತಾಯಿಯ ನಿರ್ಧಾರ ಅವರಲ್ಲಿ ಬೇಸರವೇನೂ ಹುಟ್ಟಿಸಿಲ್ಲ. ಒಬ್ಬ ಮಗ ತನ್ನ ತಾಯಿಗೆ ಸಪೋರ್ಟ್ ಮಾಡವ ಹಾಗೆ ಅಮ್ಮನ ಎಲ್ಲ ನಿರ್ಧಾರಗಳಿಗೆ ಬೆಂಗಾವಲಾಗಿ ನಿಲ್ಲುವ ಮಾತನ್ನು ಅವರು ಹೇಳಿದರು. ಕುಮಾರಸ್ವಾಮಿಯವರ ಪ್ರಚಾರ ಮಾಡುವ ಬಗ್ಗೆ ಕೇಳಿದಾಗ ಸಿಡುಕಿದ ಅಭಿಷೇಕ್, 5 ವರ್ಷಗಳ ಹಿಂದೆ ನಡೆದಿದ್ದು ಕೌಟುಂಬಿಕ ಕಲಹವೇನಲ್ಲ, ರಾಜಕೀಯದಲ್ಲಿ ಅಂಥ ಸಂಗತಿಗಳೆಲ್ಲ ನಡೆಯುತ್ತಿರುತ್ತವೆ, ಇಲ್ಲಿ ಯಾರೂ ವೈರಿಗಳಲ್ಲ ಸ್ನೇಹಿತರೂ ಅಲ್ಲ, ಕುಮಾರಸ್ವಾಮಿಯರು ಮನೆಗೂ ಬಂದಿದ್ದರು, ದೇಶಕ್ಕೆ ಮತ್ತು ಜಿಲ್ಲೆಗೆ ಒಳ್ಳೆಯದಾಗಬೇಕು ಅನ್ನೋದಷ್ಟೇ ತಮ್ಮ ಉದ್ದೇಶ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಂಡ್ಯ ಬಿಟ್ಟು ಹೋಗಲ್ಲ, ಖಡಕ್ ಡೈಲಾಗ್ ಹೊಡೆದ ಅಭಿಷೇಕ್ ಅಂಬರೀಶ್