ಕಾಂಗ್ರೆಸ್ ಪಕ್ಷಕ್ಕೆ 40 ಸ್ಥಾನಗಳನ್ನೂ ಗೆಲ್ಲಲಾಗದು, ಸಿದ್ದರಾಮಯ್ಯ ಉಡಾಫೆ ಮಾತುಗಳನ್ನು ನಿಲ್ಲಿಸಬೇಕು: ಬಿವೈ ವಿಜಯೇಂದ್ರ
ಇಂಡಿಯ ಒಕ್ಕೂಟದಲ್ಲಿ ಪ್ರಧಾನ ಮಂತ್ರಿಯಾಗಲು ಲಾಯಕ್ಕಾಗಿರುವ ಒಬ್ಬ ನಾಯಕನಾದರೂ ಇದ್ದ್ದಾರೆಯೇ? ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಮಕ್ಕೆ ನಿಲ್ಲುವ ಒಬ್ಬ ನಾಯಕನಿಲ್ಲದ ಇಂಡಿಯ ಒಕ್ಕೂಟವು ಚುನಾವಣೆಯಲ್ಲಿ ಹೇಳಹೆಸರಿಲ್ಲದಂತಾಗಲಿದೆ, ಹಾಗಾಗಿ ಸಿದ್ದರಾಮಯ್ಯನವರು ಉಡಾಫೆಯ ಮಾತುಗಳನ್ನಾಡುವುದು ನಿಲ್ಲಿಸಬೇಕು ಎಂದು ವಿಜಯೇಂದ್ರ ಹೇಳಿದರು.
ಬೆಂಗಳೂರು: ರಾಜ್ಯದ ಜನತೆ ಸಿದ್ದರಾಮಯ್ಯ ಸರಕಾರದ (Siddaramaiah government) ಪೊಳ್ಳು ಭರವಸೆಗಳಿಗೆ ಮಾರು ಹೋಗುವುದಿಲ್ಲ, ಮುಖ್ಯಮಂತ್ರಿಯವರು ಜನರನ್ನು ಯಾಮಾರಿಸುವುದು ನಿಲ್ಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (By Vijayendra) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಕೇಂದ್ರದಲ್ಲಿ ಸರ್ಕಾರ ರಚಿಸುವ ಹಗಲುಗನಸನ್ನು ಕಾಂಗ್ರೆಸ್ ನಾಯಕರು ಕಾಣುತ್ತಿದ್ದಾರೆ, ಇಂಡಿಯ ಒಕ್ಕೂಟದಲ್ಲಿ ಪ್ರಧಾನ ಮಂತ್ರಿಯಾಗಲು ಲಾಯಕ್ಕಾಗಿರುವ ಒಬ್ಬ ನಾಯಕನಾದರೂ ಇದ್ದ್ದಾರೆಯೇ? ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಸಮಕ್ಕೆ ನಿಲ್ಲುವ ಒಬ್ಬ ನಾಯಕನಿಲ್ಲದ ಇಂಡಿಯ ಒಕ್ಕೂಟವು ಚುನಾವಣೆಯಲ್ಲಿ ಹೇಳಹೆಸರಿಲ್ಲದಂತಾಗಲಿದೆ ಎನ್ನುವುದನ್ನು ಮನಗಂಡು ಸಿದ್ದರಾಮಯ್ಯನವರು ಉಡಾಫೆಯ ಮಾತುಗಳನ್ನಾಡುವುದು ನಿಲ್ಲಿಸಬೇಕು ಎಂದು ವಿಜಯೇಂದ್ರ ಹೇಳಿದರು. ನೂರಿನ್ನೂರು ಸ್ಥಾನಗಳನ್ನು ಗೆಲ್ಲುವ ಬಗ್ಗೆ ಕೊಚ್ಚಿಕೊಳ್ಳುತ್ತಿರುವ ಕಾಂಗ್ರೆಸ್ 40 ಕ್ಕಿಂತ ಹೆಚ್ಚು ಸೀಟಗಳನ್ನೂ ಗೆಲ್ಲಲಾಗದ ದಾರಣ ಸ್ಥಿತಿ ತಲುಪಲಿದೆ ಎಂದು ವಿಜಯೇಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬರ ಪರಿಹಾರದಿಂದ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಟ್ಟ ಸಿದ್ದರಾಮಯ್ಯ: ವಿಜಯೇಂದ್ರ ಗಂಭೀರ ಆರೋಪ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
