ಗಣೇಶೋತ್ಸವಕ್ಕಾಗಿ ಮುಂಜಾಗ್ರತೆ: ಬೆಂಗಳೂರು ಉತ್ತರ ಭಾಗದ ರೌಡಿಗಳ ಮನೆ ಮೇಲೆ ಪೊಲೀಸ್ ದಾಳಿ, ಪರಿಶೀಲನೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 26, 2022 | 1:19 PM

ಗಣೇಶೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತಿರಲು ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸರು ರೌಡಿಗನ್ನು ಎಚ್ಚರಿಸುತ್ತಿದ್ದಾರೆ. ಪೊಲೀಸರ ದಾಳಿಯಿಂದ ರೌಡಿ ಶೀಟರ್ ಗಳು ಆತಂಕಕ್ಕೆ ಒಳಗಾಗಿದ್ದಂತೂ ಸತ್ಯ.

ಬೆಂಗಳೂರು:  ವಿನಾಯಕ ಚತುರ್ಥಿ (Vinaya Chaturthi) ಹತ್ತಿರದಲ್ಲೇ ಇರುವುದರಿಂದ ಬೆಂಗಳೂರು  ಉತ್ತರ ವಿಭಾಗದ (Bengaluru North) ಪೊಲೀಸರು ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಕಳೆದ ಕೆಲ ತಿಂಗಳುಗಳಿಂದ ರಾಜ್ಯದಲ್ಲಿ ಒಂದು ಬಗೆಯ ಉದ್ರಿಕ್ತ ವಾತಾವರಣವಿದೆ. ಹಾಗಾಗಿ ಗಣೇಶೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತಿರಲು ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸರು ರೌಡಿಗನ್ನು ಎಚ್ಚರಿಸುತ್ತಿದ್ದಾರೆ. ಪೊಲೀಸರ ದಾಳಿಯಿಂದ ರೌಡಿ ಶೀಟರ್ ಗಳು ಆತಂಕಕ್ಕೆ ಒಳಗಾಗಿದ್ದಂತೂ ಸತ್ಯ.