ಸರ್ಕಾರ ಭ್ರಷ್ಟವಾಗಿದ್ದರೆ ಅದು ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲ: ಸಿದ್ದರಾಮಯ್ಯ

ಸರ್ಕಾರ ಭ್ರಷ್ಟವಾಗಿದ್ದರೆ ಅದು ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲ: ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Aug 26, 2022 | 2:23 PM

ಆದರೆ ಪೊಲೀಸರು ಬಿ ರಿಪೋರ್ಟ್ ನೀಡಿ ಕೇಸನ್ನು ಮುಚ್ಚಿ ಹಾಕಿದರು ಎಂದು ಹೇಳಿದರು. ಸರ್ಕಾರ ಭ್ರಷ್ಟವಾಗಿದ್ದರೆ ಅದು ಭ್ರಷ್ಟರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಮಾರ್ಮಿಕವಾಗಿ ಹೇಳಿದರು.

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಶುಕ್ರವಾರ ಮೈಸೂರಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸುವಾಗ ಬೆಳಗಾವಿಯ ಗುತ್ತೇದಾರ ಸಂತೋಷ ಪಾಟೀಲ್ ತಾವು ನಡೆಸಿದ ಕಾಮಗಾರಿಗಳ ಬಿಲ್ ಬಿಡುಗಡೆ ಮಾಡಲು ಶೇ. 40 ಕಮೀಷನ್ ಕೇಳಿದ್ದಕ್ಕೆ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡರು. ಅವರ ಡೆತ್ ನೋಟ್ ನಲ್ಲಿ ಕೆ ಎಸ್ ಈಶ್ವರಪ್ಪನವರ (KS Eshwarappa) ಹೆಸರು ಸ್ಪಷ್ಟವಾಗಿ ಉಲ್ಲೇಖವಾಗಿದೆ. ಹಾಗಾಗೇ, ಅವರು ರಾಜೀನಾಮೆ ನೀಡಿದ್ದು. ಆದರೆ ಪೊಲೀಸರು ಬಿ ರಿಪೋರ್ಟ್ ನೀಡಿ ಕೇಸನ್ನು ಮುಚ್ಚಿ ಹಾಕಿದರು ಎಂದು ಹೇಳಿದರು. ಸರ್ಕಾರ ಭ್ರಷ್ಟವಾಗಿದ್ದರೆ (corrupt) ಅದು ಭ್ರಷ್ಟರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಮಾರ್ಮಿಕವಾಗಿ ಹೇಳಿದರು.

Published on: Aug 26, 2022 02:18 PM