ಕುಮಾರಸ್ವಾಮಿ ಮತ್ತು ಶಿವಕುಮಾರ ಹಸ್ತಲಾಘವ ಮಾಡಿದರೆ ಜಿಟಿ ದೇವೆಗೌಡ ಮಾಜಿ ಮುಖ್ಯಮಂತ್ರಿಯನ್ನು ನಿರ್ಲಕ್ಷಿಸುವ ಪ್ರಯತ್ನ ಮಾಡಿದರು!
ಕುಮಾರಸ್ವಾಮಿ ಎಲ್ಲರೊಂದಿಗೆ ಹ್ಯಾಂಡ್ ಶೇಕ್ ಮಾಡಿ ಮುಂದೆ ಸಾಗುವಾಗ ಶಿವಕುಮಾರ ಪಕ್ಕದಲ್ಲಿರುವ ಜಿಟಿ ದೇವೇಗೌಡ ಮಾಜಿ ಮುಖ್ಯಮಂತ್ರಿಯನ್ನು ಕಡೆಗಣಿಸುವ ಪ್ರಯತ್ನ ಮಾಡುತ್ತಾರೆ!
ಮೈಸೂರಲ್ಲಿ ಕೆಂಪೇಗೌಡರ ಜಯಂತ್ಯುತ್ಸವ ನಡೆದಾಗಲೆಲ್ಲ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಡಿಕೆ ಶಿವಕುಮಾರ (DK Shivakumar) ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಾರೆ ಅನಿಸುತ್ತೆ ಮಾರಾಯ್ರೇ. ಕೆಲವಾರಗಳ ಹಿಂದೆ ಇಬ್ಬರು ಗಣ್ಯರು ಇದೇ ಮೈಸೂರಲ್ಲಿ ಜೊತೆಯಾಗಿ ಕಾಣಿಸಿಕೊಂಡ ಬಗ್ಗೆ ನಾವು ವರದಿ ಮಾಡಿದ್ದೆವು. ಇಂದು (ಶುಕ್ರವಾರ) ನಡೆದ ಕೆಂಪೇಗೌಡ ಜಯಂತಿ ಸಮಾರಂಭದಲ್ಲೂ ಡಿಕೆಶಿ ಮತ್ತು ಹೆಚ್ ಡಿಕೆ ವೇದಿಕೆ ಮೇಲೆ ಕಾಣಿಸಿಕೊಂಡರಲ್ಲದೆ ಹಸ್ತಲಾಘವ ಮಾಡಿದರು. ವಿಡಿಯೋನಲ್ಲಿ ಒಂದು ಸ್ವಾರಸ್ಯಕರ ಅಂಶ ನೀವು ಗಮನಿಸಬಹುದು. ಕುಮಾರಸ್ವಾಮಿ ಎಲ್ಲರೊಂದಿಗೆ ಹ್ಯಾಂಡ್ ಶೇಕ್ ಮಾಡಿ ಮುಂದೆ ಸಾಗುವಾಗ ಶಿವಕುಮಾರ ಪಕ್ಕದಲ್ಲಿರುವ ಜಿಟಿ ದೇವೇಗೌಡ (GT Devegowda) ಮಾಜಿ ಮುಖ್ಯಮಂತ್ರಿಯನ್ನು ಕಡೆಗಣಿಸುವ ಪ್ರಯತ್ನ ಮಾಡುತ್ತಾರೆ!
Latest Videos