ಬೆಂಗಳೂರು: ಜನಪ್ರಿಯ ಬ್ರ್ಯಾಂಡ್ ಕೈಗಡಿಯಾರಗಳ (wrist watches) ಶೋ ರೂಮೊಂದನ್ನು ನಿಮಗೆ ತೋರಿಸುತ್ತಿದ್ದೇವೆ ಅಂತ ಭಾವಿಸಬೇಡಿ. ಆಫ್ ಕೋರ್ಸ್ ಇವೆಲ್ಲ ಖ್ಯಾತ ಕಂಪನಿಗಳ ದುಬಾರಿ (expensive) ವಾಚುಗಳೇ. ಆದರೆ ಅವುಗಳನ್ನು ಹೀಗೆ ನೀಟಾಗಿ ಜೋಡಿಸಿಟ್ಟಿರುವುದು ಮಾತ್ರ ಬೆಂಗಳೂರು ಪೊಲೀಸ್ ಕಮೀಶನರ್ (police commissioner) ಅವರ ಕಚೇರಿಯಲ್ಲಿ! ಅಸಲಿಗೆ ಆಗಿದ್ದೇನೆಂದರೆ ಜನೆವರಿ 15 ರಂದು ಜಮೀರ್ ಅಹ್ಮದ್ ಮತ್ತು ಶಬ್ಬಿರ್ ಹೆಸರಿನ ಇಬ್ಬರು ಖದೀಮರು ಒಂದು ಲಾರಿಯಲ್ಲಿ ಸುಮಾರು ರೂ. 58 ಲಕ್ಷದ 1,282 ವಾಚ್ ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಆರ್ ಆರ್ ನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ