Ramanagara: ಕಾಡಿಂದ ಊರಿಗೆ ಬಂದು ಕೆರೆ ನೀರಿಗಿಳಿದ ಕಾಡಾನೆಗಳು ಅಲ್ಲಿಂದ ಕಾಲು ಕಿತ್ತಲೊಲ್ಲವು!
ಕಳೆದ ಮೂರುದಿನಗಳಿಂದ ಆನೆಗಳು ಕಾಡಲ್ಲಿ ಬೀಡು ಬಿಟ್ಟಿದ್ದರೂ ಅರಣ್ಯಾಧಿಕಾರಿಗಳು ಅವುಗಳನ್ನು ಕಾಡಿಗಟ್ಟುವ ಪ್ರಯಾಸ ಮಾಡದಿರುವುದು ಅವರಲ್ಲಿ ಬೇಸರ ಮತ್ತು ಅಸಹನೆ ಮೂಡಿಸಿದೆ.
ರಾಮನಗರ: ‘ಕಾಡು ನಮ್ಮದು, ಊರು ನಮ್ಮದು, ಊರ ಮುಂದಿನ ಕೆರೆಯೂ ನಮ್ಮದು!’ ಅನ್ನುವಂತಿದೆ ಇಲ್ಲಿ ಕಾಣುತ್ತಿರುವ ನಾಲ್ಕು ಕಾಡಾನೆಗಳ (wild elephants) ವರಸೆ. ಅಂದಹಾಗೆ, ದೃಶ್ಯ ಕಂಡುಬಂದಿದ್ದು ರಾಮನಗರ (Ramanagara) ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ಗ್ರಾಮದ ಕೆರೆಯಲ್ಲಿ (Lake). ಆನೆಗಳೇನೋ ಕೆರೆನೀರಲ್ಲಿ ಸ್ವಚ್ಛಂದವಾಗಿ ಮೀಯುತ್ತಿವೆ ಆದರೆ ಊರ ಜನರಲ್ಲಿ ಆತಂಕ, ಭಯ ಹೆಚ್ಚಾಗಿದೆ. ಕೆರೆ ನೀರಿಗಿಳಿದಿರುವ ಕಾಡಾನೆಗಳು ಗ್ರಾಮದಲ್ಲಿ ಬೆಳೆದು ನಿಂತ ಪೈರುಗಳ ಜಮೀನುಗಳಿಗೆ ನುಗ್ಗದಿರುತ್ತವೆಯೇ ಎಂಬ ಭೀತಿ ಅವರನ್ನು ಕಾಡುತ್ತಿದೆ. ಕಳೆದ ಮೂರುದಿನಗಳಿಂದ ಆನೆಗಳು ಕಾಡಲ್ಲಿ ಬೀಡು ಬಿಟ್ಟಿದ್ದರೂ ಅರಣ್ಯಾಧಿಕಾರಿಗಳು ಅವುಗಳನ್ನು ಕಾಡಿಗಟ್ಟುವ ಪ್ರಯಾಸ ಮಾಡದಿರುವುದು ಅವರಲ್ಲಿ ಬೇಸರ ಮತ್ತು ಅಸಹನೆ ಮೂಡಿಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos