Assembly Polls: ಕೋಲಾರದಲ್ಲೇ ನೆಲೆಸಲು ಸಿದ್ದರಾಮಯ್ಯ ನಗರದ ಹೊರವಲಯದಲ್ಲಿ ಮನೆಯನ್ನೂ ನೋಡಿಟ್ಟಿದ್ದಾರೆ!
ತಮ್ಮನ್ನ ನೋಡಲು ಬಹಳಷ್ಟು ಜನ ಬಂದು ಹೋಗುವುದು ಮಾಡುವುದರಿಂದ ಬೇರೆಯವರಿಗೆ ತೊಂದರೆಯಾಗದಂತಿರಲು ಸಿದ್ದರಾಮಯ್ಯ ಈ ಸ್ವತಂತ್ರ ಮನೆ ಆರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕೋಲಾರ: ಬಾದಾಮಿ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರರು (Siddaramaiah) ಕೋಲಾರದಿಂದ (Kolar) ಸ್ಪರ್ಧಿಸುವುದು ಹೆಚ್ಚು ಕಡಿಮೆ ಖಚಿತವಾಗಿದೆ, ಹೈಕಮಾಂಡ್ ನಿಂದ (high command) ಹಸಿರು ನಿಶಾನೆ ಸಿಗಬೇಕಿದೆಯಷ್ಟೇ. ಒಂದು ಪಕ್ಷ ಎಲ್ಲ ಸಿದ್ದರಾಮಯ್ಯ ಅಂದುಕೊಂಡಂತೆ ನಡೆದರೆ ಕೋಲಾರಲ್ಲೇ ನೆಲಸಲು ಅಥವಾ ಬಂದು ಹೋಗುವುದನ್ನು ಮಾಡಲು ಒಂದು ಮನೆಯನ್ನು ಸಹ ಪಕ್ಷದ ಕೋಲಾರ ಕಾರ್ಯಕರ್ತರು ನೋಡಿಟ್ಟಿದ್ದಾರೆ. ಈ ಮನೆ ಕೋಲಾರ ನಗರದ ಹೊರವಲಯದಲ್ಲಿದೆ ಮತ್ತು ಒಂದು ಸ್ವತಂತ್ರ ಮನೆಯಾಗಿದೆ. ಮನೆ ಸುತ್ತಮುತ್ತ ಬೇಕಾದಷ್ಟು ಖಾಲಿ ಸ್ಥಳವಿದೆ. ತಮ್ಮನ್ನ ನೋಡಲು ಬಹಳಷ್ಟು ಜನ ಬಂದು ಹೋಗುವುದು ಮಾಡುವುದರಿಂದ ಬೇರೆಯವರಿಗೆ ತೊಂದರೆಯಾಗದಂತಿರಲು ಸಿದ್ದರಾಮಯ್ಯ ಈ ಮನೆ ಆರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಟಿವಿ9 ಕೋಲಾರ ವರದಿಗಾರ ಕಳಿಸಿರುವ ವಾಸ್ತುಪ್ರಕಾರ ಸರಿಯಾಗಿರುವ ಮನೆಯ ವಿಡಿಯೋ ವೀಕ್ಷಿಸಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos