ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕೆಗೆ ಸ್ಪಷ್ಟವಾಗಿ ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ
ಸರ್ಕಾರ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಮಾಧುಸ್ವಾಮಿ ಮುನಿಸಿಕೊಂಡಿದ್ದಾರೆ ಅನ್ನೋ ವದಂತಿ ಕೆಲ ಸಮಯದಿಂದ ರಾಜಕೀಯ ವಲಯಗಳಲ್ಲಿ ಹರಿದಾಡುತ್ತಿದೆ.
ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಅವರ ಸಂಪುಟದ ಹಿರಿಯ ಸಚಿವ ಜೆಸಿ ಮಾಧುಸ್ವಾಮಿ (JC Madhu Swamy) ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಬೆಳಗಾವಿಯಲ್ಲಿಂದು ಮತ್ತೊಮ್ಮೆ ಪ್ರೂವ್ ಆಯಿತು ಮಾರಾಯ್ರೇ. ಕಾಂಗ್ರೆಸ್ (Congress) ನಾಯಕರ ವಿರುದ್ಧ ಅಗ್ರೆಸಿವ್ ಆಗಿ ಮಾತಾಡುವುದಿಲ್ಲ ಅಂತ ಮಾಧುಸ್ವಾಮಿ ಹೇಳಿದ್ದಾರೆ ಅಂತ ಪತ್ರಕರ್ತರು ಬೊಮ್ಮಾಯಿ ಅವರಿಗೆ ಹೇಳಿದಾಗ, ಅವರು ಕೇವಲ ಸದನದೊಳಗೆ ಮಾತ್ರ ಮಾತಾಡುತ್ತಾರೆ, ಹೊರಗೂ ಮಾತಾಡಲಿ ಅನ್ನುತ್ತಾರೆ. ಮುಖ್ಯಮಂತ್ರಿಗಳು ಹೀಗೆ ಹೇಳಿದ್ದಾರೆ ಅಂತ ಮಾಧುಸ್ವಾಮಿ ಅವರಿಗೆ ಹೇಳಿದಾಗ ಆಯ್ತು ಬಿಡಿ ಸದನದ ಒಳಗಂತೂ ಇನ್ನು ಮಾತಾಡಲಾಗದು, ಸದನದ ಹೊರಗಡೆಯೇ ಮಾತಾಡೋಣ ಅನ್ನುತ್ತಾರೆ. ಸರ್ಕಾರ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಮಾಧುಸ್ವಾಮಿ ಮುನಿಸಿಕೊಂಡಿದ್ದಾರೆ ಅನ್ನೋ ವದಂತಿ ಕೆಲ ಸಮಯದಿಂದ ರಾಜಕೀಯ ವಲಯಗಳಲ್ಲಿ ಹರಿದಾಡುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos