ವಿಜಯಪುರ: ಕನ್ನೂರು ಗ್ರಾಮದ ಬಾಲಕಿಯರ ಪ್ರೌಢಶಾಲೆಯಲ್ಲಿ ಮದ್ಯಸೇವಿಸಿ ಬಂದ ದೈಹಿಕ ಶಿಕ್ಷಕ ಬಿ.ಎಸ್.ರಾಠೋಡಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಹಾಗೂ ದೈಹಿಕ ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿಡಿಪಿಐಗೆ ಶಾಲಾ ಮಕ್ಕಳ ಪೋಷಕರು ಮನವಿ ಮಾಡಿದ್ದಾರೆ.
ದೈಹಿಕ ಶಿಕ್ಷಕ ರಾಠೋಡ್ ನಿತ್ಯ ಶಾಲೆಗೆ ಗೈರಾಗುತ್ತಾರೆ. ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಲ್ಲ. ಈ ಹಿಂದೆ ಹಲವಾರು ಬಾರಿ ತಿಳವಳಿಕೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪ ಮಾಡಿದ್ದಾರೆ. ಶಾಲಾ ಶಿಕ್ಷಕನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸೇವೆಯಿಂದ ಅಮಾನತ್ತು ಮಾಡಬೇಕು, ಇಲ್ಲವೇ ಬೇರಡೆ ವರ್ಗಾವಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ.