AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ: ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಹಿನ್ನಲೆ ಕೇರಳ ಕರ್ನಾಟಕ ಗಡಿಯಲ್ಲಿ ತಪಾಸಣೆ

ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಹಕ್ಕಿ ಜ್ವರ ಹಿನ್ನಲೆ ಹಿನ್ನಲೆ ಕೇರಳದಿಂದ ಕರ್ನಾಟಕಕ್ಕೆ ಬರುವ ವಾಹನಗಳ ತಪಾಸಣೆ ಹಾಗೂ ವಾಹನಗಳಿಗೆ ಸ್ಯಾನಿಟೈಸ್ ಮಾಡಲಾಗುತ್ತಿದೆ. ಅಲ್ಲದೇ ಕೇರಳದಿಂದ ಕರ್ನಾಟಕಕ್ಕೆ ಬರುವ ಕೋಳಿಗಳಿಗೆ ನಿರ್ಬಂಧ ಹೇರಲಾಗಿದೆ.

ಚಾಮರಾಜನಗರ: ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಹಿನ್ನಲೆ ಕೇರಳ ಕರ್ನಾಟಕ ಗಡಿಯಲ್ಲಿ ತಪಾಸಣೆ
ಹಕ್ಕಿ ಜ್ವರ ಭೀತಿ ಹಿನ್ನಲೆ ಗಡಿಯಲ್ಲಿ ವಾಹನಗಳ ತಪಾಸಣೆ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jan 23, 2023 | 4:06 PM

Share

ಚಾಮರಾಜನಗರ: ಕೇರಳದಲ್ಲಿ ಹಕ್ಕಿ ಜ್ವರ ಹೆಚ್ಚಾಗುತ್ತಿದ್ದು, ಕೋಳಿಗಳು ಸೇರಿದಂತೆ ಅನೇಕ ಪಕ್ಷಿಗಳು ಸಾವನ್ನಪ್ಪಿದ್ದವು. ಹೀಗಾಗಿ ಜಿಲ್ಲಾಡಳಿತ ಹಾಗೂ ಪಶು ಸಂಗೋಪನಾ ಇಲಾಖೆ ಗಡಿಯಲ್ಲಿ ಹೈ ಅಲರ್ಟ್ ಆಗಿದೆ. ಈ ರೋಗ ಕರ್ನಾಟಕದಲ್ಲಿ ಹರಡಬಾರದು ಎಂದು ಪಶು ಸಂಗೋಪನಾ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಗುಂಡ್ಲುಪೇಟೆಯ ಸಮೀಪವಿರುವ ಕೇರಳದ ಗಡಿಯಾದ ಮೂಲೆಹೊಳೆ ಚೆಕ್ ಪೋಸ್ಟ್​ನಲ್ಲಿ ಕೇರಳದಿಂದ ಬರುವ ವಾಹನಗಳ ತಪಾಸಣೆ ನಡೆಸುತ್ತಿದೆ. ಅಲ್ಲದೇ ಕೋಳಿ ಸಾಗಾಣಿಕೆ ವಾಹನಗಳು, ಕೋಳಿಯ ಆಹಾರ ಪದಾರ್ಥಗಳ ಸಾಗಾಣಿಕೆ ವಾಹನಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಪ್ರತಿ ವಾಹನಗಳಿಗೂ ಸ್ಯಾನಿಟೈಸರ್ ಸಿಂಪಡಣೆ ಮಾಡಿ ತದ ನಂತರ ಜಿಲ್ಲೆಯ ಒಳಗೆ ವಾಹನಗಳನ್ನು ಬಿಡಲಾಗುತ್ತಿದೆ. ಅಲ್ಲದೇ ಹಕ್ಕಿ ಜ್ವರ ನಮ್ಮ ಜಿಲ್ಲೆಗೆ ಹರಡದಂತೆ ತಡೆಯಲು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ ಎನ್ನುತ್ತಾರೆ ಪಶು ವೈದ್ಯಾಧಿಕಾರಿಗಳು.

ಇನ್ನು ಇದಕ್ಕೆ ಪೂರಕವಾಗಿ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಎನ್ನುವ ಗ್ರಾಮದಲ್ಲಿ ಕೋಳಿಗಳು ನಿಗೂಢವಾಗಿ ಸಾವಿಗೀಡಾಗಿದ್ದವು. ಇದರಿಂದ ಜಿಲ್ಲೆಯಲ್ಲಿ ಮತ್ತಷ್ಟು ಹಕ್ಕಿ ಜ್ವರದ ಭೀತಿ ಹೆಚ್ಚಾಗಿದೆ. ಇನ್ನೂ ಈ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಕೋಳಿಯ ದೇಹದ ಪರಿಶೀಲನೆಯನ್ನೂ ನಡೆಸಿದ್ದಾರೆ. ಜೊತೆಗೆ ಸಾವನ್ನಪ್ಪಿದ್ದ ಕೋಳಿಯ ಮಾಂಸವನ್ನು ಹೆಚ್ಚಿನ ಪರಿಶೀಲನೆಗಾಗಿ ಮೈಸೂರಿನ ಪಶು ವೈದ್ಯಕೀಯ ಲ್ಯಾಬ್​ಗೆ ಕಳುಹಿಸಲಾಗಿದೆ. ಅದರ ರಿಪೋರ್ಟ್ ಬರಬೇಕಾಗಿದೆ. ಇದನ್ನೆಲ್ಲ ಗಮಸಿದ ನಂತರ ಜಿಲ್ಲೆಗೆ ಕೇರಳದಿಂದ ಬರುವ ಕೋಳಿಗಳಿಗೂ ನಿರ್ಬಂಧ ಹೇರಲಾಗಿದೆ. ಒಂದು ವೇಳೆ ಕೋಳಿಯ ಲಾರಿಗಳು ಬಂದರು ಸಹ ಅವುಗಳನ್ನ ಹಿಂದುರಿಗಿಸಿ ಕಳುಹಿಸಲಾಗುತ್ತಿದೆ. ಮತ್ತೊಂದೆಡೆ ವಲಸೆ ಹಕ್ಕಿಗಳು ಬರುತ್ತಿರುವುದರಿಂದ ಅರಣ್ಯ ಪ್ರದೇಶದಲ್ಲಿ ಆತಂಕ ಎದುರಾಗಿದೆ. ಆದರೆ ಸದ್ಯ ಈ ಬಗ್ಗೆ ಯಾವುದೇ ಆತಂಕ ಇಲ್ಲ, ಕೆಲ ದಿನಗಳ ಹಿಂದೆ ಕಾಡಂಚಿನಲ್ಲಿ ಹಂದಿಗಳು ಸಾವನಪ್ಪಿದ್ದು ವೈರಸ್ ಕಾರಣ ಎಂಬುದು ದೃಡಪಟ್ಟಿದೆ. ಆದರೆ ಹಕ್ಕಿ ಜ್ವರದಿಂದ ಆತಂಕ ಇಲ್ಲ ಎಂದು ಬಂಡೀಪುರ ಅರಣ್ಯಧಿಕಾರಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ:ಚಾಮರಾಜನಗರ: ತುರ್ತು ಚಿಕಿತ್ಸೆಗಾಗಿ ವೃದ್ಧನನ್ನು 10 ಕಿ.ಮೀ ಡೋಲಿಯಲ್ಲಿ ಹೊತ್ತುಕೊಂಡು ಹೋದ ಗ್ರಾಮಸ್ಥರು

ಒಟ್ಟಾರೆ ಕೇರಳದಲ್ಲಿ ಹಕ್ಕಿ ಜ್ವರ ಹೆಚ್ಚಾಗಿ ಗಡಿ ಜಿಲ್ಲೆಯಲ್ಲು ಆತಂಕ ಹೆಚ್ಚಾಗಿದೆ. ಹಕ್ಕಿ ಜ್ವರ ರಾಜ್ಯಕ್ಕೆ ಕಾಲಿಡದಂತೆ ಹೇಗೆ ಮತ್ತಷ್ಟು ಮುಂಜಾಗ್ರತಾ ಕ್ರಮವಹಿಸುತ್ತಾರೆ ಎಂದು ಕಾದುನೋಡಬೇಕಾಗಿದೆ.

ವರದಿ: ದಿಲೀಪ್ ಚೌಡಹಳ್ಳಿ ಟಿವಿ9 ಚಾಮರಾಜನಗರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ