ವಿಧಾನ ಪರಿಷತ್​ನಲ್ಲಿ ಮೈಕ್ ಸ್ವಿಚ್ ಆನ್ ಮಾಡಿದ ಪವರ್ ಮಿನಿಸ್ಟರ್​ಗೆ ಕರೆಂಟ್ ಶಾಕ್

ವಿಧಾನ ಪರಿಷತ್​ನಲ್ಲಿ ಮೈಕ್ ಸ್ವಿಚ್ ಆನ್ ಮಾಡಿದ ಪವರ್ ಮಿನಿಸ್ಟರ್​ಗೆ ಕರೆಂಟ್ ಶಾಕ್

Rakesh Nayak Manchi
|

Updated on:Feb 24, 2023 | 6:48 PM

ವಿಧಾನಪರಿಷತ್​ನಲ್ಲಿ ಇಂಧನ ಸಚಿವರ ಸುನಿಲ್ ಕುಮಾರ್ ಅವರು ಮೈಕ್ ಸ್ವಿಚ್ ಆನ್ ಮಾಡುವಾಗ ಕರೆಂಟ್ ಶಾಕ್ ಆಗಿದೆ. ಈ ವೇಳೆ ಶಾಕ್ ಹೊಡೆಸಿಕೊಂಡು ಸುನೀಲ್ ಕುಮಾರ್ ಭೀತಿಗೊಳಲಾದರು.

ವಿಧಾನ ಪರಿಷತ್: ಸದನದಲ್ಲಿ ಬಿಲ್ ಮಂಡಿಸಲು ಎದ್ದು ನಿಂತ ಇಂಧನ ಸಚಿವ ಸುನಿಲ್ ಕುಮಾರ್ (Sunil Kumar) ಅವರು ಮೈಕ್ ಸ್ವಿಚ್ ಆನ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಸಚಿವರಿಗೆ ಕರೆಂಟ್ ಶಾಕ್ (Current Shock) ಆಗಿದ್ದು, ಒಮ್ಮೆಗೆ ಸಚಿವರು ಬೀತಿಗೊಳಗಾದರು. ಈ ವೇಳೆ ಪರಿಷತ್​ನಲ್ಲಿ ಪವರ್ ಮಿನಿಸ್ಟರ್​ಗೆ ಶಾಕ್ ಹೊಡೆಯಿತು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ (JC Madhuswamy) ಹಾಸ್ಯ ಚಟಾಕಿ ಹಾರಿಸಿದರು. ಈ ವೇಳೆ ಇಡೀ ಸದನವೇ ನಗೆಯಲ್ಲಿ ತೇಲಾಡಿತು. ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಪರಿಷತ್​ನಲ್ಲಿ ಸುನಿಲ್ ಕುಮಾರ್ ಅವರು ಮಂಡನೆ ಮಾಡಿದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Feb 24, 2023 06:46 PM