Bangalore Rain: ಬೆಂಗಳೂರು ಮಳೆ ದುರಂತ, ಮಾನವೀಯತೆ ಮರೆತ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆ, ಇನ್ಫೋಸಿಸ್ ಉದ್ಯೋಗಿ ಬಲಿ

Bengaluru news: ಬೆಂಗಳೂರು ನಗರದ ಕೆಆರ್ ಸರ್ಕಲ್ ಬಳಿಯ ಅಂಡರ್​ಪಾಸ್​ನಲ್ಲಿ ನಡೆದ ಕಾರು ಮುಳುಗಡೆ ಘಟನೆಯಲ್ಲಿ ಅಸ್ವಸ್ಥಗೊಂಡಿದ್ದ ಇನ್ಫೋಸಿಸ್ ಉದ್ಯೋಗಿಗೆ ತುರ್ತು ಚಿಕಿತ್ಸೆ ನೀಡದ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆ ಸಿಬ್ಬಂದಿ ಮಾನವೀಯತೆ ಮರೆತಂತಿದೆ.

ಬೆಂಗಳೂರು: ನಗರದ ಕೆಆರ್ ಸರ್ಕಲ್ (KR Circle) ಬಳಿಯ ಅಂಡರ್​ಪಾಸ್​ನಲ್ಲಿ ನಡೆದ ಕಾರು ಮುಳುಗಡೆ ಘಟನೆಯಲ್ಲಿ ಅಸ್ವಸ್ಥಗೊಂಡಿದ್ದ ಇನ್ಫೋಸಿಸ್ ಉದ್ಯೋಗಿಗೆ ತುರ್ತು ಚಿಕಿತ್ಸೆ ನೀಡದ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆ (St. Martha’s Hospital) ಸಿಬ್ಬಂದಿ ಮಾನವೀಯತೆ ಮರೆತಂತಿದೆ. ಅಸ್ವಸ್ಥ ಇನ್ಫೋಸಿಸ್ ಉದ್ಯೋಗಿಯನ್ನು ಆಸ್ಪತ್ರೆಗೆ ಕೊಂಡುಹೋಗಿ ಚಿಕಿತ್ಸೆ ನೀಡುವಂತೆ ಕೇಳಿದರೂ ಸಿಬ್ಬಂದಿ ಮಾತ್ರ ಆಕೆಯನ್ನು ದಾಖಲಿಸದೇ ನಿರ್ಲಕ್ಷ್ಯಿಸಿದ್ದಾರೆ. ನಂತರ ಇಸಿಜೆ ನಡೆಸಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ ಎಂದು ಯುವತಿಯನ್ನು ಆಸ್ಪತ್ರೆಗೆ ಕೊಂಡೊಯ್ದ ಆಟೋ ಚಾಲಕ ಅಬ್ದುಲ್ ಮಜೀದ್ ಹೇಳಿದ್ದಾರೆ. ಈ ಬಗ್ಗೆ ಟಿವಿ9 ವರದಿಗಾರರು ಆಟೋ ಚಾಲಕನೊಂದಿಗೆ ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ.

ಇದನ್ನೂ ಓದಿ: Bangalore Rains: ಬೆಂಗಳೂರು ಆವರಿಸಿದ ಕಗ್ಗತ್ತಲ ಮೋಡ, ಏಕಾಏಕಿ ಗುಡುಗು ಸಹಿತ ಗಾಳಿ ಮಳೆ, ಕೆಲವೆಡೆ ಆಲಿಕಲ್ಲು ಮಳೆ

ಮತ್ತಷ್ಟು ವಿಡಿಯೋ ಸ್ಟೋರಿ ವೀಕ್ಷಣೆಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 6:27 pm, Sun, 21 May 23