AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore Rains: ಬೆಂಗಳೂರು ಆವರಿಸಿದ ಕಗ್ಗತ್ತಲ ಮೋಡ, ಏಕಾಏಕಿ ಗುಡುಗು ಸಹಿತ ಗಾಳಿ ಮಳೆ, ಕೆಲವೆಡೆ ಆಲಿಕಲ್ಲು ಮಳೆ

ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಕಗ್ಗತ್ತಲ ಮೋಡ ಆವರಿಸಿದ ಕ್ಷಣಾರ್ಧದಲ್ಲೇ ಗಾಳಿ ಮಳೆ ಆರಂಭವಾಗಿದೆ. ಏಕಾಏಕಿಯಾಗಿ ಸುರಿದ ಧಾರಾಕಾರ ಮಳೆಗೆ ವಾಹನ ಸವಾರರು ಪರದಾಟ ನಡೆಸಿದರು.

Bangalore Rains: ಬೆಂಗಳೂರು ಆವರಿಸಿದ ಕಗ್ಗತ್ತಲ ಮೋಡ, ಏಕಾಏಕಿ ಗುಡುಗು ಸಹಿತ ಗಾಳಿ ಮಳೆ, ಕೆಲವೆಡೆ ಆಲಿಕಲ್ಲು ಮಳೆ
ಬೆಂಗಳೂರಿನಲ್ಲಿ ಭಾರೀ ಮಳೆ
Follow us
Rakesh Nayak Manchi
|

Updated on:May 21, 2023 | 4:18 PM

ಬೆಂಗಳೂರು: ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನ (Bangalore Rain) ಹಲವೆಡೆ ಕಗ್ಗತ್ತಲ ಮೋಡ ಆವರಿಸಿದ ಕ್ಷಣಾರ್ಧದಲ್ಲೇ ಗಾಳಿ ಮಳೆ ಆರಂಭವಾಗಿದೆ. ಇನ್ನು ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಏಕಾಏಕಿಯಾಗಿ ಸುರಿದ ಧಾರಾಕಾರ ಮಳೆಗೆ (Heavy Rain) ವಾಹನ ಸವಾರರು ಪರದಾಟ ನಡೆಸಿದರು. ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಕೆರೆಯಂತಾಗಿವೆ.

ನಗರದ ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ನಾಗರಬಾವಿ, ಕಾಮಾಕ್ಷಿಪಾಳ್ಯ, ಗಿರಿನಗರ, ಜಯನಗರ, ವಿಜಯನಗರ, ಮಲ್ಲೇಶ್ವರಂ, ಯಶವಂತಪುರ, ಶೇಷಾದ್ರಿಪುರಂ, ಮೇಖ್ರಿ ಸರ್ಕಲ್, ಜೆ.ಪಿ.ನಗರ, ನಂದಿನಿ ಲೇಔಟ್, ರಾಜಾಜಿನಗರ ಸುತ್ತಮುತ್ತ ಮಳೆಯಾಗಿದ್ದು, ಬೈಕ್ ಸವಾರರು, ರಸ್ತೆ ಬದಿ ವ್ಯಾಪಾರಿಗಳು ಪರದಾಡುವಂತಾಗಿದೆ. ಹಲವು ರಸ್ತೆಗಳಲ್ಲಿ ಮಳೆ ನೀರು ತುಂಬಿವೆ.

ಇದನ್ನೂ ಓದಿ: Bangalore Rain: ಬೆಂಗಳೂರಿನಲ್ಲಿ ಬಿರುಗಾಳಿ ಮಳೆಗೆ ಧರೆಗುರುಳಿದ ಮರಗಳು, ವಾಹನಗಳಿಗೆ ಹಾನಿ, ತಪ್ಪಿದ ದುರಂತ

ಬೆಂಗಳೂರು ಮಹಾನಗರದ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ, ಚಂದಾಪುರದಲ್ಲೂ ಭಾರೀ ಮಳೆಯಾಗಿದೆ. ಇನ್ನು ಕೆಲವೆಡೆ ಗುಡುಗು ಮಿಂಚು ಸಹಿತ ಮಳೆಯಾಗಿದ್ದು, ವಾರಾಂತ್ಯದ ಎಂಜಾಯ್ ಮೂಡ್​ನಲ್ಲಿದ್ದ ನಗರದ ಜನರು ಮನೆಯೊಳಗೆ ಇರುವಂತೆ ಆಗಿದೆ.

ಮಳೆ ನೀರಿನಲ್ಲಿ ಮುಳುಗಿದ ಕಾರು, ಮಹಿಳೆ ಆಸ್ಪತ್ರೆಗೆ ದಾಖಲು

ಕೆ.ಆರ್​.ಸರ್ಕಲ್​ನ ಅಂಡರ್​ಪಾಸ್​ನಲ್ಲಿ ತುಂಬಿದ್ದ ನೀರಿನಲ್ಲಿ ಕಾರೊಂದು ಮುಳುಗಿದೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಹಾಗೂ ಪೊಲೀಸರು ಕಾರಿನಲ್ಲಿದ್ದವರ ರಕ್ಷಣೆಗೆ ದಾವಿಸಿದ್ದಾರೆ. ಈವರೆಗೆ ಮೂವರನ್ನು ರಕ್ಷಿಸಲಾಗಿದ್ದು, ಇನ್ನೂ ಮೂವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಘಟನೆಯಲ್ಲಿ ತೀವ್ರ ಅಸ್ವಸ್ಥಗೊಂಡ ಮಹಿಳೆಯನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಳೆಗೆ ಕುಮಾರಕೃಪಾ ರಸ್ತೆ ಬಂದ್

ಭಾರೀ ಮಳೆ ಹಿನ್ನೆಲೆ ಕುಮಾರಕೃಪಾ ರಸ್ತೆಯನ್ನೇ ಸಂಚಾರಿ ಪೊಲೀಸರು ಬಂದ್ ಮಾಡಿದ್ದಾರೆ. ಗಾಳಿ ಮಳೆಗೆ ರಸ್ತೆ ಬದಿ ಇದ್ದ ಮರಗಳ ರೆಂಬೆ ಕೊಂಬೆಗಳು ಬಿದ್ದಿರುವ ಹಿನ್ನೆಲೆ ಬ್ಯಾರಿಗೇಡ್ ಅಳವಡಿಕೆ ಮೂಲಕ ರಸ್ತೆ ಬಂದ್ ಮಾಡಲಾಗಿದೆ. ಚಿತ್ರಕಲಾ ಪರಿಷತ್ ಮುಂಭಾಗ ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರ ಬಿದ್ದು ಕಾರು, ಬೈಕ್ ಜಖಂಗೊಂಡಿದೆ. ಇನ್ನೊಂದೆಡೆ, ಕೆ.ಆರ್​.ಸರ್ಕಲ್​ನ ಅಂಡರ್​ಪಾಸ್​ನಲ್ಲಿ ಮಳೆ ನೀರು ತುಂಬಿ ಕಾರೊಂದು ಮುಳುಗಡೆಯಾಗಿದೆ. ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:02 pm, Sun, 21 May 23

ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ
ಕರುಂಗಲಿ ಮಾಲೆಯ ಹಿಂದಿನ ರಹಸ್ಯ ಹಾಗೂ ಅದರ ಮಹತ್ವ ತಿಳಿಯಿರಿ
ಕರುಂಗಲಿ ಮಾಲೆಯ ಹಿಂದಿನ ರಹಸ್ಯ ಹಾಗೂ ಅದರ ಮಹತ್ವ ತಿಳಿಯಿರಿ
Daily horoscope: ಮಿಥುನ ರಾಶಿಯವರಿಗೆ ಐದು ಗ್ರಹಗಳ ಶುಭಫಲ
Daily horoscope: ಮಿಥುನ ರಾಶಿಯವರಿಗೆ ಐದು ಗ್ರಹಗಳ ಶುಭಫಲ
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ