ಹಾಲು, ಮೊಸರು, ವಿದ್ಯುತ್ ದರ ಏರಿಕೆ; ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿರುವ ನಗರ ನಿವಾಸಿಗಳು

Updated on: Apr 01, 2025 | 10:44 AM

ಡೈರಿ ಉತ್ಪನ್ನಗಳ ಬಗ್ಗೆ ಮಾತಾಡುವುದಾದರೆ, ಒಂದು ಲೀಟರ್ ಹಾಲಿನ ಪ್ಯಾಕೆಟ್ ಮೇಲೆ ರೂ. 2 ಹೆಚ್ಚಿಸುವುದರೊಂದಿಗೆ ಪೊಟ್ಟಣದಲ್ಲಿ ಹಾಲಿನ ಪ್ರಮಾಣವನ್ನು 50 ಮಿಲೀ ನಷ್ಟು ಕಡಿಮೆ ಮಾಡಲಾಗಿದೆ. ಒಂದು ಲೀಟರ್ ಮೊಸರಿನ ಮೇಲೆ ರೂ. 4, ಅರ್ಧ ಲೀಟರ್ ಮೇಲೆ ₹ 2, ಲಸ್ಸಿ ಮತ್ತು ಮಜ್ಜಿಗೆಯ ಪ್ಯಾಕೆಟ್ ಗಳ ಮೇಲೆ ಒಂದೊಂದು ರೂ. ಹೆಚ್ಚಿಸಲಾಗಿದೆ.

ಬೆಂಗಳೂರು, ಏಪ್ರಿಲ್1: ಹಾಲು, ಮೊಸರು, ವಿದ್ಯುತ್ ದರಗಳಲ್ಲಿ ಹೆಚ್ಚಳ ಮತ್ತು ಕಸದ ಮೇಲೆ ತೆರಿಗೆ, ನಗರದ ನಿವಾಸಿಗಳು (Bengaluru residents) ಇಂದಿನಿಂದ ಇವನ್ನೆಲ್ಲ ಭರಿಸಬೇಕು. ನಗರದ ನಿವಾಸಿಗಳಲ್ಲಿ ಬೆಲೆಯೇರಿಕೆಯ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದರೆ ಉಳಿದವರು, ಓಕೆ ಪರ್ವಾಗಿಲ್ಲ, ಮ್ಯಾನೇಜ್ ಮಾಡಬಹುದು ಅನ್ನುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಇಲ್ಲವೇ ಖುದ್ದು ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿಯದ ಹೊರತು ತಮಗೆ ಉಳಿಗಾಲವಿಲ್ಲ, ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಸರ್ಕಾರ ಜನರ ಮೇಲೆ ಹೊರೆ ಹಾಕುತ್ತಿದೆ ಎಂದು ನಗರದ ನಿವಾಸಿಯೊಬ್ಬರು ಹೇಳುತ್ತಾರೆ.

ಇದನ್ನೂ ಓದಿ:  ಹಾಲು ಒಕ್ಕೂಟಗಳ ದರ ಏರಿಕೆ ಒತ್ತಡಕ್ಕೆ ಮಣಿಯದ ಸಿಎಂ: ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದ್ದೇನು?

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ