ಮೆಟ್ರೋ ಹಳದಿ ಮಾರ್ಗದಲ್ಲಿ ಚಾಲಕರಹಿತ ಟ್ರೈನು! ಬೆಂಗಳೂರು ನಿವಾಸಿಗಳಲ್ಲಿ ರೋಮಾಂಚನಭರಿತ ಸಂಭ್ರಮ!

ಅರುಣ್​ ಕುಮಾರ್​ ಬೆಳ್ಳಿ

Updated on: May 03, 2025 | 5:21 PM

ಬೆಂಗಳೂರು ಈಗ ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಆಗಿ ಉಳಿದಿಲ್ಲ, ಅದೀಗ ಪಲ್ಯೂಶನ್ ಸಿಟಿ ಅಗಿ ಮಾರ್ಪಟ್ಟಿದೆ, ಆರ್ ವಿ ರೋಡ್​ನಿಂದ ಬೊಮ್ಮಸಂದ್ರಗೆ ಮೆಟ್ರೋ ರೈಲು ಸಂಚಾರ ಶುರುವಾದರೆ ಮಾಲಿನ್ಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ, ಮತ್ತು ಈ ಮಾರ್ಗದಿಂದ ಕೇವಲ ಐಟಿಬಿಟಿನವರಿಗೆ ಮಾತ್ರ ಅಲ್ಲ ಬೆಂಗಳೂರು ನಿವಾಸಿಗಳಿಗೂ ಅನುಕೂಲವಾಗಲಿದೆ, ಪ್ರಯಾಣದ ಸಮಯ40-45 ನಿಮಿಷಗಳಿಗೆ ಇಳಿಯಲಿದೆ ಎಂದು ರಾಜು ಗೊರೂರ್ ಹೇಳಿದರು.

ಬೆಂಗಳೂರು, ಮೇ 3: ನಮ್ಮ ಮೆಟ್ರೋ ಹಳದಿ ಲೈನ್​ನಲ್ಲಿ ರೈಲುಗಳ ಓಡಾಟ ಶುರುವಾಗಲು ಬಹಳ ದಿನ ಕಾಯಬೇಕಿಲ್ಲ. ಪ್ರಾಯಶಃ ಜೂನ್​​ನಲ್ಲಿ ಸಂಚಾರ ಆರಂಭವಾಗಬಹುದು. ಈ ಸುದ್ದಿ ಬೆಂಗಳೂರು ನಿವಾಸಿಗಳನ್ನು ಸಂಭ್ರಮಿಸುವಂತೆ ಮಾಡಿರುವುದು ಸತ್ಯ ಮತ್ತು ಸಂಭ್ರಮಕ್ಕೆ ರೋಮಾಂಚನದ ಅಂಶವೂ ಸೇರಿದೆ. ಅರ್ ವಿ ರೋಡ್ ಮತ್ತು ಬೊಮ್ಮಸಂದ್ರ (RV Road-Bommasandra) ನಡುವೆ ಸಂಪರ್ಕ ಕಲ್ಪಿಸುವ ಮೆಟ್ರೋ ಲೈನಲ್ಲಿ ಚಾಲಕರಹಿತ ಮೆಟ್ರೋ ಟ್ರೈನುಗಳು ಸಂಚರಿಸಲಿವೆ! ಹೌದು ಮಾರಾಯ್ರೇ ನೀವು ಕೇಳಿಸಿಕೊಂಡಿದ್ದು ತಪ್ಪಲ್ಲ. ಚಾಲಕರಹಿತ ರೈಲುಗಳ ಕಲ್ಪನೆ ಜನರಲ್ಲಿ ಭಯಂಕರ ಕುತೂಹಲ ಮೂಡಿಸಿದೆ ಮತ್ತು ಅದನ್ನು ನೋಡಲು ಅವರಲ್ಲಿ ತಾಳಲಾಗದ ಕಾತುರ. ಈ ವಿಶೇಷ ಟ್ರೈನುಗಳ ಟ್ರಯಲ್ ರನ್ ಬಿಎಂಆರ್​​ಸಿಎಲ್ ನಡೆಸಿದೆ ಮತ್ತು ಯಾವ ಸಮಸ್ಯೆಯೂ ಎದುರಾಗಿಲ್ಲ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ರಾಜ್ಯ ಸಂವಿಧಾನ ಓದು ಅಯೋಜಕ ರಾಜು ಗೊರೂರ್ ಡ್ರೈವರ್ ರಹಿತ ಟ್ರೈನ್ ಸಂಚಾರ ನೋಡಲು ಬಹಳ ಉತ್ಸುಕನಾಗಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:    Namma Metro Yellow line: ಯೆಲ್ಲೋ ಲೈನ್ ಬಗ್ಗೆ ಮಹತ್ವದ ಅಪ್​ಡೇಟ್, ಬೆಂಗಳೂರಿನತ್ತ ಮೂರನೇ ಚಾಲಕರಹಿತ ರೈಲು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.