ಬಾಣಲೆಯೇ ಹೆಲ್ಮೆಟ್! ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಹಿಂಬದಿ ಸವಾರನ ವಿಡಿಯೋ ವೈರಲ್
ಬೆಂಗಳೂರಿನ ರೂಪೇನ ಅಗ್ರಹಾರ ಪ್ರದೇಶದಲ್ಲಿ ದ್ವಿಚಕ್ರ ವಾಹನದ ಹಿಂಬದಿ ಸವಾರನೊಬ್ಬ ಟ್ರಾಫಿಲ್ ಸಿಗ್ನಲ್ ಬಳಿ ಬಾಣಲೆಯಿಂದ ತಲೆ ಮುಚ್ಚಿಕೊಳ್ಳಲು ಯತ್ನಿಸಿದ ವಿಡಿಯೋ ಒಂದು ವೈರಲ್ ಆಗಿದೆ. Karnataka Portfolio ಎಕ್ಸ್ ಹ್ಯಾಂಡಲ್ ವೀಡಿಯೊವನ್ನು ಹಂಚಿಕೊಂಡಿದ್ದು, ಈ ದೃಶ್ಯವು ನೋಡುಗರನ್ನು ಮತ್ತು ಸಂಚಾರ ಪೊಲೀಸರನ್ನು ದಿಗ್ಭ್ರಮೆಗೊಳಿಸಿತು ಎಂದು ಉಲ್ಲೇಖಿಸಿದೆ.
ಬೆಂಗಳೂರು, ನವೆಂಬರ್ 3: ದ್ವಿಚಕ್ರ ವಾಹನದ ಹಿಂಬದಿ ಸವಾರನೊಬ್ಬ ಹೆಲ್ಮೆಟ್‌ಗೆ ಬದಲಾಗಿ ಬಾಣಲೆ ಅಥವಾ ಫ್ರೈಯಿಂಗ್ ಪ್ಯಾನ್ ಅನ್ನು ತಲೆಮೇಲಿಟ್ಟುಕೊಂಡು ಸಂಚರಿಸಿದ ವಿಡಿಯೋ ವೈರಲ್ ಆಗಿದೆ. ಬೆಂಗಳೂರಿನ ರೂಪೇನ ಅಗ್ರಹಾರದಲ್ಲಿ ಈ ವಿದ್ಯಮಾನ ನಡೆದಿದೆ ಎನ್ನಲಾಗಿದ್ದು, ವೈರಲ್ ವಿಡಿಯೋವನ್ನು Karnataka Portfolio ಎಕ್ಸ್ ಹ್ಯಾಂಡಲ್ ಪೋಸ್ಟ್ ಮಾಡಿದೆ. ಈ ವಿಡಿಯೋಗೆ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.