ಬೆಂಗಳೂರು ರಸ್ತೆ ಗುಂಡಿ: ಹೆಬ್ಬಾಳ ರಿಂಗ್​ ರೋಡ್​ನಲ್ಲಿ ಮುಚ್ಚಿದ ಮೂರೇ ದಿನಕ್ಕೆ ಕಿತ್ತುಬಂದ ಡಾಂಬರ್

Edited By:

Updated on: Dec 04, 2025 | 12:41 PM

ಬೆಂಗಳೂರಿನ ರಿಂಗ್ ರೋಡ್‌ನಲ್ಲಿ ಮುಚ್ಚಿದ್ದ ಗುಂಡಿಗಳ ಡಾಂಬರ್ ಕೇವಲ ಮೂರೇ ದಿನಗಳಲ್ಲಿ ಕಿತ್ತುಬರುತ್ತಿದೆ. ಹೆಬ್ಬಾಳದಿಂದ ಕೆ.ಆರ್.ಪುರ ಮಾರ್ಗದ ವೈಟ್ ಟಾಪಿಂಗ್ ರಸ್ತೆಯ ಮೇಲೆ ಕಳಪೆ ಗುಣಮಟ್ಟದ ಡಾಂಬರೀಕರಣ ಮಾಡಲಾಗಿದ್ದು, ‘ಟಿವಿ9’ ಗ್ರೌಂಡ್ ರಿಪೋರ್ಟ್‌ನಲ್ಲಿ ಈ ಅಸಮರ್ಪಕ ಕಾಮಗಾರಿ ಬಟಾಬಯಲಾಗಿದೆ. ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.

ಬೆಂಗಳೂರು, ಡಿಸೆಂಬರ್ 4: ಬೆಂಗಳೂರು ಮಹಾನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿಯ ಕಳಪೆ ಗುಣಮಟ್ಟದಿಂದ ಕೂಡಿರುವುದು ಮತ್ತೊಮ್ಮೆ ಬೆಳಕಿಗೆ ಬಂದಿದೆ. ರಿಂಗ್ ರೋಡ್‌ನಲ್ಲಿ ಮುಚ್ಚಲಾದ ಗುಂಡಿಗಳ ಡಾಂಬರ್ ಕೇವಲ ಮೂರು ದಿನಗಳಲ್ಲಿ ಕಿತ್ತುಬರುತ್ತಿದ್ದು, ವಾಹನ ಸವಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಬ್ಬಾಳದಿಂದ ಕೆ.ಆರ್.ಪುರಕ್ಕೆ ಸಂಪರ್ಕ ಕಲ್ಪಿಸುವ ರಿಂಗ್ ರೋಡ್‌ನಲ್ಲಿ ಈ ದುಸ್ಥಿತಿ ಕಂಡುಬಂದಿದೆ. ವೈಟ್ ಟಾಪಿಂಗ್ ಮಾಡಿದ್ದ ರಸ್ತೆಯ ಮೇಲೆ ಕಳಪೆ ಗುಣಮಟ್ಟದ ಡಾಂಬರ್ ಹಾಕಲಾಗಿದ್ದು, ಇದು ಕೈಯಿಂದಲೇ ಕಿತ್ತುಬರುವ ಸ್ಥಿತಿಯಲ್ಲಿರುವುದು ‘ಟಿವಿ9’ ರಿಯಾಲಿಟಿ ಚೆಕ್​​ನಲ್ಲಿ ಕಂಡುಬಂದಿದೆ. ಈ ಕಾಮಗಾರಿಯ ಜವಾಬ್ದಾರಿಯ ಬಗ್ಗೆ ಜಿಬಿಎ ಅಧಿಕಾರಿಗಳು ಮತ್ತು ಬಿಎಂಆರ್​ಸಿಎಲ್ ಅಧಿಕಾರಿಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ