ಬೆಂಗಳೂರಿನಲ್ಲಿ 7 ಕೋಟಿ ರೂ. ದರೋಡೆ: 5.56 ಕೋಟಿ ಸಿಕ್ಕಿದ್ದೆಲ್ಲಿ? ಖದೀಮರ ಖರ್ತಾನಕ್ ಹೆಜ್ಜೆ ಗುರುತು ಬಯಲು
ಬೆಂಗಳೂರಿನಲ್ಲಿ ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ವಾಹನ ತಡೆದು .11 ಕೋಟಿ ಹಣ ದರೋಡೆ ಪ್ರಕರಣರವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಖದೀಮರು ಹೊತ್ತೊಯ್ದಿದ್ದ 7 ಕೋಟಿ 11 ಲಕ್ಷ ರೂಪಾಯಿನಲ್ಲಿ ಬರೋಬ್ಬರಿ 5.56 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಹೊಸಕೋಟೆಯ ಪಾಳುಬಿದ್ದ ಮನೆಯಲ್ಲೇ 5.56 ಕೋಟಿ ರೂ. ಪತ್ತೆಯಾಗಿದೆ. ಇನ್ನು ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಆರೋಪಿಗಾಗಿ ಶೋಧ ಕಾರ್ಯ ನಡೆದಿದೆ.
ಬೆಂಗಳೂರು, (ನವೆಂಬರ್ 23): ಬೆಂಗಳೂರಿನಲ್ಲಿ ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ವಾಹನ ತಡೆದು .11 ಕೋಟಿ ಹಣ ದರೋಡೆ ಪ್ರಕರಣರವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಖದೀಮರು ಹೊತ್ತೊಯ್ದಿದ್ದ 7 ಕೋಟಿ 11 ಲಕ್ಷ ರೂಪಾಯಿನಲ್ಲಿ ಬರೋಬ್ಬರಿ 5.56 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಹೊಸಕೋಟೆಯ ಪಾಳುಬಿದ್ದ ಮನೆಯಲ್ಲೇ 5.56 ಕೋಟಿ ರೂ. ಪತ್ತೆಯಾಗಿದೆ. ಇನ್ನು ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಆರೋಪಿಗಾಗಿ ಶೋಧ ಕಾರ್ಯ ನಡೆದಿದೆ. ಇನ್ನು ಪ್ರಕರಣದ ಆರೋಪಿ ರಾಕೇಶ್ ಎನ್ನುವಾತ ನಿನ್ನೆ (ನವೆಂಬರ್ 22) ರಾತ್ರಿ ಸಿದ್ದಾಪುರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಬಳಿಕ ದರೋಡೆಯ ಪಿನ್ ಟು ಪಿನ್ ಮಾಹಿತಿಯನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದು, ಇದುವರೆಗೂ ಒಟ್ಟು 6 ಕೋಟಿ 29 ಲಕ್ಷ ಹಣ ರಿಕವರಿ ಮಾಡಲಾಗಿದ್ದು, ಇನ್ನುಳಿದ 82 ಲಕ್ಷ ರೂಪಾಯಿನೊಂದಿಗೆ ಎಸ್ಕೇಪ್ ಆಗಿರುವ ದಿನೇಶ್ ಗಾಗಿ ಹುಡುಕಾಟ ನಡೆದಿದೆ.

