Loading video

ಹೊಸಕೋಟೆ: ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ

| Updated By: ವಿವೇಕ ಬಿರಾದಾರ

Updated on: Mar 26, 2025 | 3:22 PM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ 8 ವರ್ಷದ ಧನಂಜಯ್ ಗೌಡ ಅವರು ಕಾರ್ಟ್ ವೀಲ್ ಕರಾಟೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. 46 ಮ್ಯಾಕ್ಸಿಮಮ್ ಫಾರ್ವರ್ಡ್ ಮತ್ತು ಬ್ಯಾಕ್ವರ್ಡ್ ಸ್ಟಂಟ್‌ಗಳನ್ನು ಮಾಡಿ ಏಷ್ಯಾ ಮತ್ತು ಭಾರತೀಯ ದಾಖಲೆ ಪುಸ್ತಕಗಳಲ್ಲಿ ಸ್ಥಾನ ಪಡೆದಿದ್ದಾರೆ. ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರು ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ. ಧನಂಜಯ್ ಗೌಡರ ಈ ಸಾಧನೆ ಅನೇಕರಿಗೆ ಸ್ಪೂರ್ತಿಯಾಗಿದೆ.

ದೇವನಹಳ್ಳಿ, ಮಾರ್ಚ್​ 26: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲರುವ ದಿ ಪೊಲರೀಸ್ ಇಂಟರ್ನ್ಯಾಷನಲ್ ಶಾಲೆಯ ಧನಂಜಯ್ ಗೌಡ (8) ಅವರ ಹೆಸರು ಏಷ್ಯಾ ಬುಕ್ ಆಫ್ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿದೆ. ಕಾರ್ಟ್ ವೀಲ್ ಕರಾಟೆಯಲ್ಲಿ 46 ಮ್ಯಾಕ್ಸಿಮಮ್ ಫಾರ್ವಡ್​ ಆ್ಯಂಡ್ ಬ್ಯಾಕ್​ವರ್ಡ್ ಸ್ಟಂಟ್ ಮಾಡುವುದರ ಮೂಲಕ ಬಾಲಕ ಧನಂಜಯ ಗೌಡ ಸಾಧನೆ ಮಡಿದ್ದಾರೆ. ಧನಂಜಯ ಗೌಡ ಅವರಿಗೆ ಇಂಡಿಯನ್ ಬುಕ್ ಆಫ್​ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಧನಂಜಯ ಗೌಡ ಅವರ ಸಾಧನೆಗೆ ಶಾಲಾ‌ ಆಡಳಿತ ಮಂಡಳಿ ಮತ್ತು ಪೋಷಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.