ರಿಯಲ್ಟರ್ ಮತ್ತು ರೌಡಿಗಳೊಂದಿಗೆ ಬೆರೆಯದಂತೆ ಸಿಬ್ಬಂದಿಗೆ ಎಚ್ಚರಿಸಿದ ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ
ನಿಯಮಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಕಠಿಣ ಕ್ರಮತೆಗೆದುಕೊಳ್ಳುವ ಬಗ್ಗೆಯೂ ಎಸ್ ಪಿ ಎಚ್ಚರಿಸಿರುವ ಪೊಲೀಸ್ ಅಧಿಕಾರಿ, ಬೊಜ್ಜು ಬೆಳೆಸಿಕೊಂಡಿರುವ ಸಿಬ್ಬಂದಿಗೆ ಕರಗಿಸಿಕೊಳ್ಳುವ ಸಲಹೆ ನೀಡಿದ್ದಾರೆ.
ಬೆಂಗಳೂರು: ಪೊಲೀಸರು ರೌಡಿಗಳೊಂದಿಗೆ, ರಿಯಲ್ಟರ್ ಗಳೊಂದಿಗೆ (realtor) ಸ್ನೇಹ, ಬಾಂಧವ್ಯ ಇಟ್ಟಕೊಳ್ಳುವ ಸಂಗತಿ ಹೊಸದೇನಲ್ಲ. ಇದು ಪ್ರಾಯಶಃ ಎಲ್ಲ ಕಡೆ ನಡೆಯುವ ವಿದ್ಯಮಾನ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ (Bengaluru Rural district) ಜಮೀನು ಚಿನ್ನಕ್ಕಿಂತಲೂ ತುಟ್ಟಿ. ಹಾಗಾಗೇ ಲ್ಯಾಂಡ್ ಮಾಫಿಯಾ ಇಲ್ಲಿ ಜೋರಾಗಿದೆ. ಕೆಲ ಪೊಲೀಸರು ರೀಯಲ್ ಎಸ್ಟೇಟ್ ಕುಳಗಳೊಂದಿಗೆ ಕೈ ಜೋಡಿಸಿ ದುಂಡಗಾಗುತ್ತಿರವ ಸುದ್ದಿ ಕಿವಿಗೆ ಬಿದ್ದ ಕೂಡಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ (Mallikarjun Baladandi) ಜಿಲ್ಲೆಯ ಪೊಲೀಸರನ್ನು ನೆಲಮಂಗಲ ಉಪವಿಭಾಗದ ಪರೇಡ್ ಮೈದಾನಕ್ಕೆ ಕರೆಸಿ ಇಲಾಖೆಯ ಶಿಸ್ತು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿದ್ದಾರೆ. ನಿಯಮಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಕಠಿಣ ಕ್ರಮತೆಗೆದುಕೊಳ್ಳುವ ಬಗ್ಗೆಯೂ ಎಸ್ ಪಿ ಎಚ್ಚರಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos