ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಲಾರಿ: ತಪ್ಪಿದ ಭಾರಿ ಅನಾಹುತ!
ಲಾರಿ ಪಲ್ಟಿಯಾದ ಕಾರಣ ಬುಧವಾರ ತಡರಾತ್ರಿ ಬೆಂಗಳೂರಿನ ದೀಪಾಂಜಲಿ ನಗರದಿಂದ ಸ್ಯಾಟಲೈಟ್ ಕಡೆ ಬರುವ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ಜನ ಪರದಾಡುವಂತಾಯಿತು. ಅದೃಷ್ಟವಶಾತ್, ಲಾರಿ ಪಲ್ಟಿಯಾಗುವ ವೇಳೆ ಹೆಚ್ಚಿನ ವಾಹನಗಳು ಸಮೀಪ ಇಲ್ಲದ್ದರಿಂದ ಭಾರಿ ಅನಾಹುತ ತಪ್ಪಿತು. ಘಟನೆಯ ವಿಡಿಯೋ ಇಲ್ಲಿದೆ.
ಬೆಂಗಳೂರು, ಸೆಪ್ಟೆಂಬರ್ 4: ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರದ ಹಲಗೆ ತುಂಬಿದ್ದ ಲಾರಿ ಪಲ್ಟಿಯಾದ ಘಟನೆ ಬುಧವಾರ ತಡರಾತ್ರಿ 1 ಗಂಟೆ ಸುಮಾರಿಗೆ ನಡೆದಿದೆ. ಅದೃಷ್ಟವಶಾತ್, ವಾಹನ ಸಂಚಾರ ಕಡಿಮೆ ಇದ್ದುದರಿಂದ ಭಾರಿ ಅನಾಹುತ ತಪ್ಪಿದೆ. ಶಾಂತಿ ಟಿಂಬರ್ ಟ್ರೆಡಿಂಗ್ ಕಂಪನಿಗೆ ಮರದ ಹಲಗೆಗಳನ್ನ ತಂದಿದ್ದ ಲಾರಿ, ರಿವರ್ಸ್ ತೆಗೆದುಕೊಳ್ಳುವ ವೇಳೆ ಪಲ್ಟಿಯಾಗಿದೆ. ಪರಿಣಾಮವಾಗಿ ದೀಪಾಂಜಲಿ ನಗರದಿಂದ ಸ್ಯಾಟಲೈಟ್ ಕಡೆ ಬರುವ ರಸ್ತೆಯಲ್ಲಿ ನಡುರಾತ್ರಿಯೂ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಕ್ರೇನ್ ಮೂಲಕ ಲಾರಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
