ಇಸ್ಲಾಂ ಬಗ್ಗೆ ಹಾಗೆ ಮಾತನಾಡಿದ್ರೆ ಕಲ್ಲಲ್ಲಿ ಹೊಡೆದು ಸಾಯಿಸ್ತಿದ್ದರು: ಬಾನು ಮುಷ್ತಾಕ್ ವಿರುದ್ಧ ಸಿಟಿ ರವಿ ಕಿಡಿ
ದಸರಾ ಉದ್ಘಾಟನೆಗೆ ಬೂಕರ್ ವಿಜೇತೆ ಸಾಹಿತಿ ಬಾನು ಮುಷ್ತಾಕ್ ಅವರ ಆಯ್ಕೆ ಬಗ್ಗೆ ಬಿಜೆಪಿ ಆಕ್ರೋಶ ಮುಂದುವರಿದಿದೆ. ಎಂಎಲ್ಸಿ ಸಿಟಿ ರವಿ ರಾಯಚೂರಿನಲ್ಲಿ ಮಾತನಾಡಿ, ತಾಯಿ ಭುವನೇಶ್ವರಿ ಬಗ್ಗೆ ಬಾನು ಮುಷ್ತಾಕ್ ಮಾತನಾಡಿದಂತೆ ನಾವೇನಾದರೂ ಇಸ್ಲಾಂ ಬಗ್ಗೆ ಮಾತನಾಡಿದರೆ ಕಲ್ಲಲ್ಲಿ ಹೊಡೆದು ಸಾಯಿಸ್ತಿದ್ದರು. ಹೀಗಾಗಿ ಅವರು ನೆಲದ ಸಂಸ್ಕೃತಿ ಗೌರವಿಸಲಿ ಎಂದಿದ್ದಾರೆ.
ರಾಯಚೂರು, ಸೆಪ್ಟೆಂಬರ್ 4: ಕನ್ನಡ ತಾಯಿ ಭುವನೇಶ್ವರಿ ಬಗ್ಗೆ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ನೀಡಿರುವ ಹೇಳಿಕೆ ಸರಿಲ್ಲ ಎಂದು ಬಿಜೆಪಿ ಎಂಎಲ್ಸಿ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದು, ತಾಯಿ ಭುವನೇಶ್ವರಿಗೆ ಅರಶಿನ ಕುಂಕುಮ ಇಡದೆ ಬುರ್ಖಾ ಹಾಲು ಆಗುತ್ತದೆಯೇ ಎಂದು ಪ್ರಶ್ನಿಸಿದರು. ರಾಯಚೂರಿನಲ್ಲಿ ಮಾತನಾಡಿದ ಅವರು, ಬಾನು ಮುಷ್ತಾಕ್ ಅವರು ಇಸ್ಲಾಂ ಆಗಿರಬಹುದು. ಆದರೆ, ಮಾತನಾಡುವಾಗ ಈ ನೆಲದ ಸಂಸ್ಕೃತಿಗೆ ವಿರುದ್ಧವಾಗಿ ಮಾತನಾಡಿದ್ದಾರೆ. ಇಸ್ಲಾಂ ಬಗ್ಗೆ ನಾವೇನಾದರೂ ಹಾಗೆ ಮಾತನಾಡಿದ್ದರೆ ಕಲ್ಲಲ್ಲಿ ಹೊಡೆದು ಸಾಯಿಸುತ್ತಿದ್ದರು. ನಾವು ಹಾಗೇನೂ ಮಾಡಿಲ್ಲ. ಆ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಲಿ ಎಂಬುದಷ್ಟೇ ನಮ್ಮ ಆಗ್ರಹ ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್ನ್ಯೂಸ್: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ

