ನಾಗ್ಪುರ: ಸೌರ ವಿದ್ಯುತ್ ಸ್ಥಾವರದಲ್ಲಿ ಸ್ಫೋಟ, ಓರ್ವ ಸಾವು, ಹಲವರಿಗೆ ಗಾಯ
ನಾಗ್ಪುರದ ಚಂಡೂರಿನ ಸಮೀಪವಿರುದ್ಧ ಸೌರ ವಿದ್ಯುತ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದ್ದು,ಓರ್ವ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ.ನಾಗ್ಪುರದ ಕಲ್ಮೇಶ್ವರ ತೆಹಸಿಲ್‌ನ ಬಜಾರ್ ಗ್ರಾಮದ ಬಳಿಯ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ.ಸುತ್ತಮುತ್ತಲಿನ ಕಾರ್ಮಿಕರು ಮತ್ತು ನಿವಾಸಿಗಳಲ್ಲಿ ಭೀತಿ ಮೂಡಿಸಿತು. ಜಿಲ್ಲೆಯ ಬಜಾರ್‌ಗಾಂವ್‌ನಲ್ಲಿರುವ ಸೌರ ಸ್ಫೋಟಕಗಳ ಆರ್‌ಡಿಎಕ್ಸ್ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯ ಸಮಯದಲ್ಲಿ, ಕಂಪನಿಯಲ್ಲಿ 900 ರಿಂದ 6,000 ಕಾರ್ಮಿಕರನ್ನು ವಿವಿಧ ಪಾಳಿಗಳಲ್ಲಿ ನಿಯೋಜಿಸಲಾಗಿತ್ತು.
ನಾಗ್ಪುರ, ಸೆಪ್ಟೆಂಬರ್ 04: ನಾಗ್ಪುರದ ಚಂಡೂರಿನ ಸಮೀಪವಿದ್ಧ ಸೌರ ವಿದ್ಯುತ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದ್ದು,ಓರ್ವ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ. ನಾಗ್ಪುರದ ಕಲ್ಮೇಶ್ವರ ತೆಹಸಿಲ್‌ನ ಬಜಾರ್ ಗ್ರಾಮದ ಬಳಿಯ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ.ಸುತ್ತಮುತ್ತಲಿನ ಕಾರ್ಮಿಕರು ಮತ್ತು ನಿವಾಸಿಗಳಲ್ಲಿ ಭೀತಿ ಮೂಡಿಸಿತು. ಜಿಲ್ಲೆಯ ಬಜಾರ್‌ಗಾಂವ್‌ನಲ್ಲಿರುವ ಸೌರ ಸ್ಫೋಟಕಗಳ ಆರ್‌ಡಿಎಕ್ಸ್ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯ ಸಮಯದಲ್ಲಿ, ಕಂಪನಿಯಲ್ಲಿ 900 ರಿಂದ 6,000 ಕಾರ್ಮಿಕರನ್ನು ವಿವಿಧ ಪಾಳಿಗಳಲ್ಲಿ ನಿಯೋಜಿಸಲಾಗಿತ್ತು.
ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಎಂಟರಿಂದ ಒಂಬತ್ತು ಮಂದಿಗೆ ವಿವಿಧ ಹಂತದ ಗಾಯಗಳಾಗಿವೆ. ಗಾಯಗೊಂಡವರ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.ರಿಯಾಕ್ಟರ್ ನಿಂದ ಹೊಗೆ ಬರುತ್ತಿರುವುದನ್ನು ನೋಡಿ ನಾವೆಲ್ಲರೂ ಹೊರಬಂದೆವು. ಸುಮಾರು 20-25 ನಿಮಿಷಗಳ ಕಾಲ ನಿರಂತರ ಹೊಗೆಯ ನಂತರ, ಸ್ಫೋಟ ಸಂಭವಿಸಿತು. ಸ್ಫೋಟದಿಂದಾಗಿ 40-50 ಮಂದಿ ಗಾಯಗೊಂಡಿದ್ದಾರೆ ಎಂದು ಕಾರ್ಮಿಕರು ತಿಳಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

