Video: ಯುವತಿ ಮೇಲೆ ಹಲ್ಲೆಗೆ ಯತ್ನ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಉಬರ್ ಆಟೋ ಚಾಲಕ

Edited By:

Updated on: Oct 11, 2025 | 10:08 AM

ಬೆಂಗಳೂರಿನಲ್ಲಿ ಯುವತಿಯೊಬ್ಬರು ಬುಕ್ ಮಾಡಿದ ಉಬರ್ ಆಟೋ ಚಾಲಕನ ವಿರುದ್ಧ ನಿಂದನೆ ಮತ್ತು ಹಲ್ಲೆ ಯತ್ನದ ಆರೋಪ ಮಾಡಿದ್ದಾರೆ. ಎರಡು ಆ್ಯಪ್‌ಗಳಲ್ಲಿ ಆಟೋ ಬುಕ್ ಮಾಡಿದ್ದಾರೆ. ಏಕಕಾಲಕ್ಕೆ ಎರಡು ಆಟೋ ಯುವತಿ ಇರುವ ಸ್ಥಳಕ್ಕೆ ಬಂದಿದೆ. ಈ ವೇಳೆ ಯುವತಿ ಒಂದು ಆಟೋವನ್ನು ಆಯ್ಕೆ ಮಾಡಿಕೊಂಡಿದ್ದು, ಇದರಿಂದ ಕೋಪಗೊಂಡ ಮತ್ತೊಬ್ಬ ಆಟೋ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಯುವತಿ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಉಬರ್ ಸಂಸ್ಥೆಗೂ ದೂರು ನೀಡಿದ್ದಾರೆ.

ಬೆಂಗಳೂರು, ಅ.10: ಬೆಂಗಳೂರಿನಲ್ಲಿ ಉಬರ್ ಆಟೋ ಚಾಲಕನೊಬ್ಬ (Bengaluru Uber auto driver) ಯುವತಿಯನ್ನು ನಿಂದಿಸಿ, ಹಲ್ಲೆಗೆ ಯತ್ನ ನಡೆಸಿದ ಗಂಭೀರ ಘಟನೆಯೊಂದು ನಡೆದಿದೆ. ಈ ಘಟನೆ ಅಕ್ಟೋಬರ್ 2ರಂದು ಸಂಜೆ 7:30ರ ಸುಮಾರಿಗೆ ನಡೆದಿದೆ ಎಂದು ಯುವತಿ ಆರೋಪಿಸಿದ್ದಾರೆ. ಆಟೋ ಚಾಲಕ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಮತ್ತು ಹಲ್ಲೆಗೂ ಯತ್ನಿಸಿದ್ದಾನೆ ಎಂದು ಯುವತಿ ಹೇಳಿದ್ದಾರೆ. ಘಟನೆ ನಡೆದಾಗ ಯುವತಿ ವಿಡಿಯೋ ರೆಕಾರ್ಡ್ ಕೂಡ ಮಾಡಿದ್ದಾರೆ. ವಿಡಿಯೋ ಮಾಡುವ ಮೊದಲು ಹಲ್ಲೆ ನಡೆದಿತ್ತು ಎಂದು ಯುವತಿ ಹೇಳಿದ್ದಾರೆ. ಈ ಘಟನೆಗೆ ಪ್ರಮುಖ ಕಾರಣ ಆಟೋ ಬುಕಿಂಗ್‌ನಲ್ಲಾದ ಗೊಂದಲ. ಯುವತಿಯು ಎರಡು ಬೇರೆ ಬೇರೆ ಆ್ಯಪ್‌ನಲ್ಲಿ ಎರಡು ಆಟೋಗಳನ್ನು ಬುಕ್ ಮಾಡಿದ್ದರು. ಎರಡು ಆಟೋಗಳು ಏಕಕಾಲಕ್ಕೆ ಪಿಕ್ ಅಪ್ ಸ್ಥಳಕ್ಕೆ ಬಂದಿದೆ. ಈ ಎರಡು ಆಟೋದಲ್ಲಿ ಯುವತಿ ಒಂದು ಆಟೋವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಮತ್ತೊಂದು ಆಟೋದ ಚಾಲಕ, ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾನೆ ಹಾಗೂ ಹಲ್ಲೆಗೆ ಪ್ರಯತ್ನಿಸಿದ್ದಾನೆ. ಇದನ್ನು ಯುವತಿಯ ತನ್ನ ಮೊಬೈಲ್ ಫೋನ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ನಂತರ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿಕೊಂಡಿದ್ದಾರೆ. ಈ ಘಟನೆ ಕುರಿತು ನೊಂದ ಯುವತಿ ಉಬರ್ ಸಂಸ್ಥೆಗೂ ದೂರು ಸಲ್ಲಿಸಿದ್ದು, ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಆ್ಯಪ್ ಆಧಾರಿತ ಸಾರಿಗೆ ಸೇವೆಗಳ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಚಾಲಕನಿಗೆ ತಕ್ಷಣದಿಂದಲೇ ಆ್ಯಪ್​ಗೆ ನಿರ್ಬಂಧ: ಉಬರ್ ಸ್ಪಷ್ಟನೆ

ಈ ಘಟನೆ ದುರದೃಷ್ಟಕರ ಎಂದು ಉಬರ್ ಪ್ರತಿಕ್ರಿಯಿಸಿದ್ದು, ಇಂತಹ ಕೃತ್ಯಗಳಿಗೆ ನಮ್ಮ ಪ್ಲಾಟ್​ಫಾರ್ಮ್ನಲ್ಲಿ ಅವಕಾಶವಿಲ್ಲ ಎಂದಿದೆ. ಅಲ್ಲದೆ, ಯುವತಿ ನೀಡಿದ ಫೀಡ್​ಬ್ಯಾಕ್​ ಆಧಾರದಲ್ಲಿ ತಕ್ಷಣದಿಂದಲೇ ಆ ಚಾಲಕನ ಉಬರ್ ಆ್ಯಕ್ಸೆಸ್​​ ಅನ್ನು ನಿರ್ಬಂಧಿಸಿದ್ದೇವೆ. ಕಾನೂನು ಜಾರಿ ಅಧಿಕಾರಿಗಳೊಂದಿಗೆ ನಾವು ಸಹಕರಿಸುತ್ತೇವೆ. ಎಲ್ಲ ಅಗತ್ಯ ಮಾಹಿತಿ ಒದಗಿಸುತ್ತೇವೆ ಎಂದು ತಿಳಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 10, 2025 03:29 PM