CBSE Syllabus: ಬೋಧನೆಗೆ ಅನುಮೋದನೆ ಇಲ್ಲದ್ದಿದ್ದರೂ ಬೆಂಗಳೂರಿನ ಆರ್ಕಿಡ್ ಇಂಟರ್ನ್ಯಾಶನಲ್ ಸ್ಕೂಲ್ ಪೋಷಕರಿಂದ ಲಕ್ಷಗಟ್ಟಲೆ ಹಣ ಪೀಕುತ್ತಿದೆ?
ಸ್ಟೇಟ್ ಸಿಲಬಸ್ ನಲ್ಲೇ ಪರೀಕ್ಷೆ ನಡೆಸುವುದಾದರೆ ತಮ್ಮಿಂದ ಯಾಕೆ ಫೀಸುಗಳ ರೂಪದಲ್ಲಿ ಲಕ್ಷಗಟ್ಟಲೆ ಹಣ ಪೀಕಲಾಗುತ್ತಿದೆ ಅಂತ ಪೋಷಕರು ಕೇಳುತ್ತಿದ್ದಾರೆ. ಆಡಳಿತ ಮಂಡಳಿಯ ಪ್ರತಿಕ್ರಿಯೆ ನಮಗೆ ಲಭ್ಯವಾಗಿಲ್ಲ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಆರ್ಕಿಡ್ ಇಂಟರ್ ನ್ಯಾಶನಲ್ ಶಾಲೆಯ (Orchid International School) ಆವರಣದಲ್ಲಿ ಶನಿವಾರ ಬೆಳಗ್ಗೆ ಜಮಾಯಿಸಿದ ಪೋಷಕರು ಶಾಲಾ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ಅವರ ಆರೋಪವೆಂದರೆ, ಈ ಶಾಲೆ ಇಂಟರ್ ನ್ಯಾಶನಲ್ ಸ್ಕೂಲ್ ಅಂತ ದೊಡ್ಡದಾಗಿ ಹೇಳಿಕೊಂಡರೂ ಸಿಬಿ ಎಸ್ ಈ (CBSE) ಪಠ್ಯಕ್ರಮಕ್ಕೆ ಅನುಮೋದನೆ ಸಿಕ್ಕಿಲ್ಲ. ಹಾಗಾಗಿ ಮಕ್ಕಳಿಗೆ ಸ್ಟೇಟ್ ಸಿಲಬಸ್ (state syllabus) ಬೋಧಿಸಿ ಅದೇ ಪಠ್ಯಕ್ರಮಕ್ಕೆ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸುತ್ತಿದೆ. ಸ್ಟೇಟ್ ಸಿಲಬಸ್ ನಲ್ಲೇ ಪರೀಕ್ಷೆ ನಡೆಸುವುದಾದರೆ ತಮ್ಮಿಂದ ಯಾಕೆ ಫೀಸುಗಳ ರೂಪದಲ್ಲಿ ಲಕ್ಷಗಟ್ಟಲೆ ಹಣ ಪೀಕಲಾಗುತ್ತಿದೆ ಅಂತ ಪೋಷಕರು ಕೇಳುತ್ತಿದ್ದಾರೆ. ಆಡಳಿತ ಮಂಡಳಿಯ ಪ್ರತಿಕ್ರಿಯೆ ನಮಗೆ ಲಭ್ಯವಾಗಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 30, 2023 12:57 PM