Fight Enters Next Level | ಬೇರೆ ಪಕ್ಷದ ನಾಯಕರ ತೇಜೋವಧೆ ಮಾಡುವ ಡಿಕೆ ಶಿವಕುಮಾರ್ ರಾಜಕೀಯದಲ್ಲಿರಲು ನಾಲಾಯಕ್ಕು: ರಮೇಶ್ ಜಾರಕಿಹೊಳಿ

Fight Enters Next Level | ಬೇರೆ ಪಕ್ಷದ ನಾಯಕರ ತೇಜೋವಧೆ ಮಾಡುವ ಡಿಕೆ ಶಿವಕುಮಾರ್ ರಾಜಕೀಯದಲ್ಲಿರಲು ನಾಲಾಯಕ್ಕು: ರಮೇಶ್ ಜಾರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Jan 30, 2023 | 12:21 PM

ರಮೇಶ್ ಜಾರಕಿಹೊಳಿ ಗಾಳಿಯಲ್ಲಿ ಗುಂಡು ಹಾರಿಸುವುದಿಲ್ಲ ಅಂತ ಸಾಬೀತುಮಾಡಲು ಶಿವಕುಮಾರ್ ವಿರುದ್ಧ ತಮ್ಮಲ್ಲಿರುವ ಸಾಕ್ಷ್ಯಗಳ ಒಂದು ಝಲಕ್ ತೋರಿಸುವುದಾಗಿ ಅವರು ಹೇಳಿದರು.

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ರಮೇಶ್ ಜಾರಕಿಹೊಳಿ (Ramesh Jarkiholi) ನಡುವಿನ ವೈಯಕ್ತಿಕ ತಿಕ್ಕಾಟ ಮತ್ತೊಂದು ಹಂತ ಪ್ರವೇಶಿಸಿದೆ. ಸೋಮವಾರ ಬೆಳಗಾವಿ ಸುದಿಗೋಷ್ಟಿಯೊಂದನ್ನು ಕರೆದು ಮಾತಾಡಿದ ಜಾರಕಿಹೊಳಿ ಅವರು ಶಿವಕುಮಾರ್ ರಾಜಕೀಯ ಕ್ಷೇತ್ರಕ್ಕೆ ನಾಲಾಯಕ್ಕಾದ ವ್ಯಕ್ತಿ ಎಂದು ಜರಿದರು. ಸುಳ್ಳು ಅರೋಪಗಳನ್ನು ಮಾಡುತ್ತಾ, ಸಿಡಿಗಳ ಮೂಲಕ ಷಡ್ಯಂತ್ರಗಳನ್ನು (conspiracy) ರಚಿಸಿ ವಿರೋಧ ಪಕ್ಷದ ನಾಯಕರ ತೇಜೋವಧೆ ಮಾಡುವ ವ್ಯಕ್ತಿ ರಾಜಕಾರಣಿ ಅನಿಸಿಕೊಳ್ಳಲಾರ ಎಂದು ಜಾರಕಿಹೊಳಿ ಜರಿದರು. ಶಿವಕುಮಾರ ವಿರುದ್ಧ ತನ್ನಲ್ಲಿ 120 ಸಾಕ್ಷ್ಯಗಳಿವೆ, ಅವರಂತೆ ನಾನು ಸಹ ಸೂಕ್ತ ಸಹಾಯಕ್ಕಾಗಿ ಕಾಯುತ್ತಿದ್ದೆ, ಈಗ ಅದು ಒದಗಿಬಂದಿದೆ. ಸಾಕ್ಷ್ಯಗಳನ್ನು ಮಾಧ್ಯಮಗಳ ಎದುರು ಬಿಡುಗಡೆ ಮಾಡುವುದಿಲ್ಲ, ಸಂಬಂಧಪಟ್ಟ ಇಲಾಖೆಗಳಿಗೆ ಅವುಗಳನ್ನು ನೀಡುವುದಾಗಿ ಅವರು ಹೇಳಿದರು. ರಮೇಶ್ ಜಾರಕಿಹೊಳಿ ಗಾಳಿಯಲ್ಲಿ ಗುಂಡು ಹಾರಿಸುವುದಿಲ್ಲ ಅಂತ ಸಾಬೀತುಮಾಡಲು ಶಿವಕುಮಾರ್ ವಿರುದ್ಧ ತಮ್ಮಲ್ಲಿರುವ ಸಾಕ್ಷ್ಯಗಳ ಒಂದು ಝಲಕ್ ತೋರಿಸುವುದಾಗಿ ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 30, 2023 12:19 PM