AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vishnuvardhan Memorial | ಚುನಾವಣೆ ಹಿನ್ನೆಲೆಯಲ್ಲಿ ಕಾಟಾಚಾರಕ್ಕೆ ಸ್ಮಾರಕ ನಿರ್ಮಿಸಿ ಸರ್ಕಾರ ಸಾಹಸಸಿಂಹನಿಗೆ ಅವಮಾನ ಮಾಡಿದೆ: ಅಭಿಮಾನಿಗಳು

Vishnuvardhan Memorial | ಚುನಾವಣೆ ಹಿನ್ನೆಲೆಯಲ್ಲಿ ಕಾಟಾಚಾರಕ್ಕೆ ಸ್ಮಾರಕ ನಿರ್ಮಿಸಿ ಸರ್ಕಾರ ಸಾಹಸಸಿಂಹನಿಗೆ ಅವಮಾನ ಮಾಡಿದೆ: ಅಭಿಮಾನಿಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 30, 2023 | 11:10 AM

Share

ವಿಷ್ಣು ದಾದಾ ಎಲ್ಲರ ಹೃದಯಗಳಲ್ಲಿದ್ದಾರೆ, ಹೀಗೆ ಕಾಟಾಚಾರಕ್ಕೆ ಸ್ಮಾರಕ ನಿರ್ಮಿಸಿ ಸಾಹಸಸಿಂಹನನ್ನು ಅವಮಾನಿಸಬಾರದಿತ್ತು ಎಂದು ಅಭಿಮಾನಿಗಳು ಹೇಳಿದರು.

ಮೈಸೂರು: ಚುನಾವಣೆಯ ಧಾವಂತದಲ್ಲಿ ಡಾ ವಿಷ್ಣುವರ್ಧನ ಸ್ಮಾರಕವನ್ನು (Vishnuvardhan Memorial) ಲೋಕಾರ್ಪಣೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಸರ್ಕಾರ ಮತ್ತೊಂದು ಇಕ್ಕಟ್ಟಿಗೆ, ವಿವಾದಕ್ಕೆ ಸಿಕ್ಕಿದೆ. ಲೋಕಾರ್ಪಣೆ ಕಾರ್ಯಕ್ರಮವನ್ನು ಬೆಳಗ್ಗೆಯಿಂದ ಸಾಯಂಕಾಲದವರೆಗೆ ಅದ್ದೂರಿಯಗಿ ನಡೆಸಿದ ಸರ್ಕಾರಕ್ಕೆ ವಿಷ್ಣುವರ್ಧನ ಸ್ಮಾರಕದ ಬಳಿ ಬೆಳಕಿನ (light) ವ್ಯವಸ್ಥೆ ಮಾಡುವ ಯೋಗ್ಯತೆ ಕೂಡ ಇಲ್ಲ ಅಂತ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಮಾರಕವನ್ನು ನೋಡಲು ಆಗಮಿಸುವ ಅಭಿಮಾನಿಗಳಿಗೆ ಕೂರಲು ಜಾಗವಿಲ್ಲ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಕಾರ್ಯಕ್ರಮಕ್ಕೆ ಫಿಲ್ಮ್ ಚೇಂಬರ್ ನ ಒಬ್ಬೇಒಬ್ಬ ಪ್ರತಿನಿಧಿ ಬಂದಿಲ್ಲ, ಸರ್ಕಾರಕ್ಕೆ ಇದು ನಾಚಿಕೆಗೇಡಿನ ಸಂಗತಿ ಅಂತ ಅಭಿಮಾನಿಗಳು ಅಸಮಾಧಾನ, ಬೇಸರ ಮತ್ತು ನೋವು ವ್ಯಕ್ತಪಡಿಸಿದರು. ವಿಷ್ಣು ದಾದಾ ಎಲ್ಲರ ಹೃದಯಗಳಲ್ಲಿದ್ದಾರೆ, ಹೀಗೆ ಕಾಟಾಚಾರಕ್ಕೆ ಸ್ಮಾರಕ ನಿರ್ಮಿಸಿ ಸಾಹಸಸಿಂಹನನ್ನು ಅವಮಾನಿಸಬಾರದಿತ್ತು ಎಂದು ಅಭಿಮಾನಿಗಳು ಹೇಳಿದರು.

ಮತ್ಷಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ