ಶಿವಕುಮಾರ್ ನನಗೆ ಸಲಹೆ ನೀಡುವ ಬದಲು ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಬಸನಗೌಡ ಯತ್ನಾಳ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 09, 2023 | 5:45 PM

ಭ್ರಷ್ಟಾಚಾರದ ಆರೋಪಗಳಲ್ಲಿ ಮುಳುಗಿರುವ ವ್ಯಕ್ತಿಯೊಬ್ಬನಿಂದ ಸಲಹೆ ಸೂಚನೆ ಪಡೆಯುವ ಸ್ಥಿತಿಯೇನೂ ತನಗೆ ಬಂದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕುರಿತು ಹೇಳುತ್ತಾರೆ. ಈ ವಾರವೆಲ್ಲ ಶಿವಕುಮಾರ್ ಹೈದರಾಬಾದ್ ನಲ್ಲಿದ್ದ ಕಾರಣ ಸದನದಲ್ಲಿ ಇವರಿಬ್ಬರ ಮುಖಾಮುಖಿಯಾಗಿಲ್ಲ, ಸೋಮವಾರ ಬೆಳಗಾವಿಯಲ್ಲಿ ಪುನರಾರಂಭಗೊಳ್ಳುವ ವಿಧಾನಸಭಾ ಅಧಿವೇಶನದಲ್ಲಿ ವಾಕ್ಸಮರ ನಿರೀಕ್ಷಿಸಬಹುದು.

ದೇವನಹಳ್ಳಿ: ಬೆಳಗಾವಿಯಿಂದ ಇಂದು ಬೆಂಗಳೂರಿಗೆ ಆಗಮಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಡಿಕೆ ಶಿವಕುಮಾರ್ (Dk Shivakumar) ಅವರು ಯತ್ನಾಳ್ ರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಅದಕ್ಕೆ ಈಗಾಗಲೇ ಪ್ರತಿಕ್ರಿಯೆ ನೀಡಿಯಾಗಿದೆ, ತನ್ನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸುವ ಮೊದಲು ಅವರು ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ ಎಂದು ಹೇಳಿದರು. ಯಾಕೆಂದರೆ, ತಾನಂತೂ ಶಿವಕುಮಾರ್ ವಿರುದ್ಧ ಕಾನೂನಾತ್ಮಕ ಹೋರಾಟದ ಆರಂಭಿಸಿಯಾಗಿದೆ. ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ಸರ್ಕಾರ ಸಿಬಿಐ ತನಿಖೆ ಆದೇಶವನ್ನು ವಾಪಸ್ಸು ಪಡೆದಿರುವುದು ಅವರ ಮನಸ್ಥಿತಿಯನ್ನು ವಿವರಿಸುತ್ತದೆ. ಯಾವುದೇ ತಪ್ಪು ಮಾಡಿಲ್ಲ ಅಂತಾದರೆ ತನಿಖೆ ಎದುರಿಸಬೇಕಿತ್ತು, ಸೋಲಿನ ಭೀತಿ ಯಾಕೆ ಅವರನ್ನು ಆವರಿಸಿದೆ ಎಂದು ಯತ್ನಾಳ್ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on