Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಅಧಿವೇಶನ; ಸಿದ್ದರಾಮಯ್ಯ ಜೊತೆ ನಾವಿದ್ದೇವೆ, ಹೆದರುವ ಅವಶ್ಯಕತೆಯಿಲ್ಲ ಅಂತ ಬಸನಗೌಡ ಯತ್ನಾಳ್ ಹೇಳಿದ್ದು ಯಾಕೆ?

ಬೆಳಗಾವಿ ಅಧಿವೇಶನ; ಸಿದ್ದರಾಮಯ್ಯ ಜೊತೆ ನಾವಿದ್ದೇವೆ, ಹೆದರುವ ಅವಶ್ಯಕತೆಯಿಲ್ಲ ಅಂತ ಬಸನಗೌಡ ಯತ್ನಾಳ್ ಹೇಳಿದ್ದು ಯಾಕೆ?

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 05, 2023 | 7:24 PM

ಡಿಕೆ ಶಿವಕುಮಾರ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಹಾವು ಮುಂಗುಸಿ ಸಂಬಂಧವಿದೆ. ಉಪ ಮುಖ್ಯಮಂತ್ರಿ ಇವತ್ತು ಸದನದಲ್ಲಿರಲಿಲ್ಲ, ಆದರೆ ಯತ್ನಾಳ್ ಮಾತಾಡಿದ್ದನ್ನು ಟಿವಿಯಲ್ಲಿ ನೋಡಿರುತ್ತಾರೆ ಇಲ್ಲವೇ ರಾತ್ರಿ ನೋಡುತ್ತಾರೆ. ಉಪ ಮುಖ್ಯಮಂತ್ರಿಯನ್ನು ಕೆಣಕಲೆಂದೇ ಯತ್ನಾಳ್ ಇಂದು ಸದನದಲ್ಲಿ ಹಾಗೆ ಮಾತಾಡಿದ್ದು. ಆದರೆ, ಸೀಸನ್ಡ್ ಪೊಲಿಟಿಶಿಯನ್ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ಯತ್ನಾಳ್ ಮಾತಿನ ಮರ್ಮ ಅರಿಯರೇ?

ಬೆಳಗಾವಿ: ಚಳಿಗಾಲದ ವಿಧಾನಸಭಾ ಅಧಿವೇಶನ ರಂಗೇರುತ್ತಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಸದನದಲ್ಲಿ ಮಾತಾಡಲು ಎದ್ದು ನಿಂತರೆ ಗಂಭೀರ ವಿಷಯಗಳನ್ನು ಪ್ರಸ್ತಾಪಿಸುತ್ತಾ ಸಚಿವರ, ಮುಖ್ಯಮಂತ್ರಿ ಇಲ್ಲ ಉಪ ಮುಖ್ಯಮಂತ್ರಿಯ ಕಾಲೆಳೆಯುತ್ತಾರೆ. ಇವತ್ತು ಸಿದ್ದರಾಮಯ್ಯನವರೇ (Siddaramaiah) ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಅಂತ ಹೇಳಿದ್ದು ನಿಸ್ಸಂದೇಹವಾಗಿ ಡಿಕೆ ಶಿವಕುಮಾರ್ (DK Shivakumar) ಮತ್ತು ಅವರ ಪರವಾಗಿರುವ ಶಾಸಕರನ್ನು ಛೇಡಿಸಲು. ಸಿದ್ದರಾಮಯ್ಯ ಕುರಿತು ಮಾತಾಡಿದ ಯತ್ನಾಳ್, ಅವರು ಮೊದಲಿನ ಸಿದ್ದರಾಮಯ್ಯ ಅಲ್ಲ ಅಂತ ಜನಸಾಮಾನ್ಯನಿಗೂ ಗೊತ್ತಾಗಿದೆ, ಅವರು ಮೊದಲಿನ ಹಾಗಿದ್ದರೆ ಆಡಳಿತ ಮತ್ತು ರಾಜ್ಯದ ಬರದ ಸ್ಥಿತಿ ಹೀಗಿರುತ್ತಿರಲಿಲ್ಲ. ಅವರು ಮಂಕಾಗಿರೋದ್ರಿಂದಲೇ ಸ್ಥಿತಿ ಬಿಗಡಾಯಿಸಿದೆ, ಸಿದ್ದರಾಮಯ್ಯ ಯಾರಿಗೂ, ಯಾವುದಕ್ಕೂ ಹೆದರುವ ಅಗತ್ಯವಿಲ್ಲ, ನಾವೆಲ್ಲ ಅವರೊಂದಿಗಿದ್ದೇವೆ ಅಂತ ಬಸನಗೌಡ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ