ಸಕಲೇಶಪುರ ಬಳಿಯ ಕೆಎಫ್​ಡಿಸಿ ನೆಡುತೋಪಿನಲ್ಲಿ ಸರ್ಕಾರೀ ಗೌರವಗಳೊಂದಿಗೆ ಸಾಂಸ್ಕೃತಿಕ ರಾಯಭಾರಿ ಅರ್ಜುನನ ಅಂತ್ರಕ್ರಿಯೆ

ಸಕಲೇಶಪುರ ಬಳಿಯ ಕೆಎಫ್​ಡಿಸಿ ನೆಡುತೋಪಿನಲ್ಲಿ ಸರ್ಕಾರೀ ಗೌರವಗಳೊಂದಿಗೆ ಸಾಂಸ್ಕೃತಿಕ ರಾಯಭಾರಿ ಅರ್ಜುನನ ಅಂತ್ರಕ್ರಿಯೆ

ಅರುಣ್​ ಕುಮಾರ್​ ಬೆಳ್ಳಿ
|

Updated on:Dec 05, 2023 | 4:47 PM

ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯಚರಣೆಯಲ್ಲಿ ಅರ್ಜುನನನ್ನು ಬಳಸುವಾಗ ಅರಣ್ಯಾಧಿಕಾರಿಗಳು ಎಚ್ಚರವಹಿಸಬೇಕಿತ್ತು ಆದರೆ, ಅವರ ಡೆವಿಲ್ ಮೇ ಕೇರ್ ಧೋರಣೆಯಿಂದಾಗಿ ಅರ್ಜುನ ಪ್ರಾಣ ಕಳೆದುಕೊಂಡಿದ್ದಾನೆ, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎಲ್ಲ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಕೂಡಲೇ ವಜಾ ಮಾಡಬೇಕು ಮತ್ತು ವಿಧಾನ ಸಭಾ ಅಧಿವೇಶನದಲ್ಲಿ ಅವನ ಸಾವಿನ ಬಗ್ಗೆ ಚರ್ಚೆಯಾಗಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಹಾಸನ: ನಾಡಹಬ್ಬ ದಸರಾ ಉತ್ಸವದಲ್ಲಿ ಎಂಟು ಬಾರಿ ಅಂಬಾರಿ (Howdah) ಹೊತ್ತು ತನ್ನ ರಾಜಗಾಂಭೀರ್ಯದೊಂದಿಗೆ ಮೈಸೂರಿನ ರಸ್ತೆಗಳಲ್ಲಿ ನಡೆಯುತ್ತಾ ಕನ್ನಡಿಗರು, ದೇಶದ ಬೇರೆ ಬೇರೆ ಭಾಗಗಳ ಜನ ಮತ್ತು ವಿದೇಶಿಯರ ಮನಸೂರೆಗೊಂಡು ಸಾಂಸ್ಕೃತಿಕ ರಾಯಭಾರಿ ಅನಿಸಿಕೊಂಡಿದ್ದ ಮೈಸೂರು ಒಡೆಯರ್ ರಾಜವಂಶಸ್ಥರ ಹೆಮ್ಮೆಯ ಆನೆ ಅರ್ಜುನ (elephant Arjuna) ಈಗ ಕೇವಲ ನೆನಪು ಮಾತ್ರ. ಕಾಡಾನೆಗಳನ್ನು (wild elephants) ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಬಲಿಯಾದ ಅರ್ಜುನನ ಸಾವಿನ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಅವನ ಸಾವಿಗೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯೇ ಕಾರಣ ಎಂದು ಜನ ಮತ್ತು ಮಾವುತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆ ವಿಷಯವನ್ನು ಇನ್ನೊಂದು ಸಂದರ್ಭದಲ್ಲಿ ಚರ್ಚೆ ಮಾಡೋಣ. ಅಗಲಿದ ಅರ್ಜುನನಿಗೆ ಸರ್ಕಾರೀ ಗೌರವದೊಂದಿಗೆ ಜಿಲ್ಲೆಯ ಸಕಲೇಶಪುರ ಹತ್ತಿರದ ದಬ್ಬಳಿಕಟ್ಟೆಯಲ್ಲಿರುವ ಕೆಎಫ್ ಡಿಸಿ ನೆಡುತೋಪಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮಾವುತರು ಮತ್ತು ಅರ್ಜುನನ್ನು ಹತ್ತಿರದಿಂದ ಬಲ್ಲ ಜನ ಅಂತ್ಯಕ್ರಿಯೆ ವೇಳೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 05, 2023 04:45 PM