‘ಎಲ್ಲರನ್ನೂ ಒಗ್ಗೂಡಿಸುವುದು ಮೊದಲ ಚಾಲೆಂಜ್’: ಫಿಲ್ಮ್ ಚೇಂಬರ್ ಹೊಸ ಅಧ್ಯಕ್ಷ ಭಾ.ಮ. ಹರೀಶ್ ಪ್ರತಿಕ್ರಿಯೆ
Bha Ma Harish: ಕನ್ನಡ ಚಿತ್ರರಂಗದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಇವೆ ಎಂಬುದು ನಿಜ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕಿರುವ ಸವಾಲು ಭಾ.ಮ. ಹರೀಶ್ ಅವರ ಮುಂದಿದೆ.
ಭಾರಿ ನಿರೀಕ್ಷೆ ಮೂಡಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce) ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ನಿರ್ಮಾಪಕ ಭಾ.ಮ. ಹರೀಶ್ (Bha Ma Harish) ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಈಗ ಅವರ ಮುಂದೆ ಅನೇಕ ಸವಾಲು ಮತ್ತು ಜವಾಬ್ದಾರಿಗಳಿವೆ. ಕನ್ನಡ ಚಿತ್ರರಂಗದ (Kannada Film Industry) ಹಲವು ಸಮಸ್ಯೆಗಳಿಗೆ ವಾಣಿಜ್ಯ ಮಂಡಳಿ ಮೂಲಕ ಪರಿಹಾರ ಸಿಗಬೇಕಿದೆ. ಆ ಎಲ್ಲ ವಿಚಾರಗಳ ಬಗ್ಗೆ ಗಮನ ಹರಿಸುವುದಾಗಿ ಭಾ.ಮ. ಹರೀಶ್ ಹೇಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಇವೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕಿದೆ ಎಂದು ಅವರು ಹೇಳಿದ್ದಾರೆ. ಭಾ.ಮ. ಹರೀಶ್ ಎದುರು ಸಾ.ರಾ. ಗೋವಿಂದು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರಿಗಿಂತ ಹೆಚ್ಚು ಮತ ಪಡೆಯುವ ಮೂಲಕ ಭಾ.ಮ. ಹರೀಶ್ ಗೆಲುವು ಸಾಧಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: May 29, 2022 04:03 PM