ಬಾಗಪ್ಪ ಹರಿಜನ್ ಪ್ರೀತಿಸಿ ಮದುವೆಯಾಗಿದ್ದ, ಅದರೆ ಅವನ ಸಂಗಾತಿ ಬಹಳ ದಿನ ಬದುಕುಳಿಯಲಿಲ್ಲ: ಮಹಾಂತೇಶ್, ಪೊಲೀಸ್ ಆಧಿಕಾರಿ

|

Updated on: Feb 12, 2025 | 7:01 PM

ಕೊಲೆ ಮತ್ತು ಜನರ ಸುಲಿಗೆ ಮಾಡುತ್ತ ಅಪರಾಧ ಲೋಕಕ್ಕೆ ಕಾಲಿಡುವವರ ಅಂತ್ಯವೂ ಘೋರವಾಗಿರುತ್ತದೆ ಮತ್ತು ಅವರು ಸಹಜ ಸಾವು ಕಾಣಲ್ಲ ಎಂದು ಮಹಾಂತೇಶ್ ಹೇಳುತ್ತಾರೆ. ಬಾಗಪ್ಪನಿಗೆ ಸಾಕಷ್ಟು ದುಡ್ಡು ಬರಲಾರಂಭಿಸಿತ್ತು ಜೊತೆಗೆ ಕುಖ್ಯಾತಿಯೂ ದಕ್ಕಿತ್ತು, ಇಂಥವರಿಗೆ ಕ್ರಮೇಣ ಸಾವಿನ ಭಯ ಇಲ್ಲದಂತಾಗಿಬಿಡುತ್ತದೆ ಎನ್ನುವ ಮಹಾಂತೇಶ್ ತಾವು ಬಾಗಲಕೋಟೆ ಕಡೆ ಟ್ರಾನ್ಸ್​ಫರ್ ಆಗಿ ಬಂದ ಮೇಲೆ ಬಾಗಪ್ಪನಿಗೆ ಸಂಬಂಧಿಸಿದ ವಿದ್ಯಮಾನಗಳಿಂದ ಸಂಪರ್ಕ ತಪ್ಪಿತು ಎನ್ನುತ್ತಾರೆ.

ಬಾಗಲಕೋಟೆ: ಪೊಲೀಸ್ ಅಧಿಕಾರಿ ಮಹಾಂತೇಶ್ ಜಿದ್ದಿ  ಅವರು ಬಾಗಲಕೋಟೆಗೆ ವರ್ಗಾವಣೆ ಹೊಂದುವ ಮೊದಲು ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಕೆಲಸ ಮಾಡಿರುವುದರಿಂದ ಬಾಗಪ್ಪ ಹರಿಜನ್, ಚಂದಪ್ಪ ಹರಿಜನ್ ಬಗ್ಗೆ ಚೆನ್ನಾಗಿ ಗೊತ್ತಿದೆ. ಟಿವಿ9 ವರದಿಗಾರನೊಂದಿಗೆ ಮಾತಾಡಿರುವ ಅವರು ಬಾಗಪ್ಪನ ಪ್ರಣಯ ಪ್ರಸಂಗದ ಬಗ್ಗೆ ಚುಟುಕಾದ ಮಾಹಿತಿ ನೀಡಿದರು. ಅಸಲಿಗೆ ಅವನಿಗೆ ಸರ್ಕಾರಿ ವಕೀಲೆಯೊಬ್ಬರ ಮೇಲೆ ಪ್ರೇಮಾಂಕುರವಾಗಿತ್ತು ಮತ್ತು ಅವರಿಬ್ಬರು ಮದುವೆ ಕೂಡ ಆದರಂತೆ. ಅದರೆ ದುರದೃಷ್ಟವಶಾತ್ ಅವನ ಪತ್ನಿ ಚಿಕ್ಕೋಡಿ ಬಳಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಮರಣಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬಾಗಪ್ಪ ಹರಿಜನ್ ಬದುಕಿಗೆ ಅಂತ್ಯ ಕಾಣಿಸಲು ಹಂತಕರು ಫೂಲ್​ಪ್ರೂಫ್​ ಯೋಜನೆಯೊಂದಿಗೆ ಅಗಮಿಸಿದ್ದರು!