ಬಾಗಪ್ಪ ಹರಿಜನ್ ಬದುಕಿಗೆ ಅಂತ್ಯ ಕಾಣಿಸಲು ಹಂತಕರು ಫೂಲ್ಪ್ರೂಫ್ ಯೋಜನೆಯೊಂದಿಗೆ ಅಗಮಿಸಿದ್ದರು!
ಬಾಗಪ್ಪ ಹರಿಜನ್ ನನ್ನು ಕೊಂದವರು ಯಾರು? ಅವನ ಮಕ್ಕಳಾದ ಇಂದಿರಾಬಾಯಿ ಮತ್ತು ಗಂಗೂಬಾಯಿ ವಿಜಯಪುರದ ಗಾಂಧಿಚೌಕ್ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ ಪಿಂಟೂ ಅಲಿಯಾಸ್ ಪ್ರಕಾಶ್ ಎನ್ನುವವನು ಕೊಲೆ ಮಾಡಿಸಿರುವ ಸಾಧ್ಯತೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಅವನು ಪೋಸ್ಟೊಂದನ್ನು ಹಾಕಿ ನನ್ನ ಸಹೋದರ ರವಿ ಆತ್ಮಕ್ಕೆ ಈಗ ಶಾಂತಿ ಸಿಕ್ಕಿತು ಅಂತ ಬರೆದುಕೊಂಡಿದ್ದಾನಂತೆ. ರವಿಯನ್ನು ಕೊಲೆ ಮಾಡಿಸಿದ ಅರೋಪ ಬಾಗಪ್ಪನ ಮೇಲಿತ್ತು.
ವಿಜಯಪುರ: ಭೀಮಾ ನದಿತೀರದಲ್ಲಿ ನೆತ್ತರು ಹರಿಯುವುದು ಹೊಸದಲ್ಲ ಮತ್ತು ಬಾಗಪ್ಪ ಹರಿಜನ್ ಕೊಲೆಯೊಂದಿಗೆ ಅದು ಮುಗಿಯುವಂಥದ್ದೂ ಅಲ್ಲ. ನಿನ್ನೆ ರಾತ್ರಿ ಭೀಕರವಾಗಿ ಹತ್ಯೆಯಾದ ಭಾಗಪ್ಪನ ಬಾಡಿಗೆ ಮನೆಯ ಬಳಿಯಿಂದ ನಮ್ಮ ವಿಜಯಪುರ ವರದಿಗಾರ ಕೊಲೆಯ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಅವನ ಕೊಲೆ ಮಾಡಲು ಹಂತಕರು ಫೂಲ್ಪ್ರೂಫ್ ಯೋಜನೆಯೊಂದಿಗೆ ದಾಳಿ ನಡೆಸಿದ್ದರು. ಅವರಿಗೆ ಬಾಗಪ್ಪ ಹರಿಜನ್ ಇಲ್ಲಿ ಕಾಣುತ್ತಿರುವ ಅತೀಕ್ ಹೆಸರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ ಅಂತ ಗೊತ್ತಿತ್ತು ಮತ್ತು ಇಲ್ಲಿಗೆ ಮಾರಕಾಸ್ತ್ರ ಮತ್ತು ಪಿಸ್ಟಲ್ ಗಳ ಜೊತೆ ಬರುವ ಮೊದಲು ಹಂತಕರು ಏರಿಯಾದ ವಿದ್ಯುತ್ ಸರಬರಾಜನ್ನು ನಿಲ್ಲಿಸಿದ್ದರು. ಬಾಗಪ್ಪ ತಪ್ಪಿಸಿಕೊಳ್ಳುವ ಸಾಧ್ಯತೆಗಳನ್ನು ಕೊನೆಗೊಳಿಸಿದ್ದ ಕೊಲೆಗಡುಕರು ಎಲ್ಲ ರಸ್ತೆಗಳಲ್ಲಿ ಒಂದೊಂದು ಗುಂಪನ್ನು ಮಾರಕಾಸ್ತ್ರಗಳೊಂದಿಗೆ ಸನ್ನದ್ಧ ಸ್ಥಿತಿಯಲ್ಲಿ ನಿಲ್ಲಿಸಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಭೀಮಾತೀರದ ಹಂತಕನ ಹತ್ಯೆ ಹಿಂದೆ ಇದೆಯಾ ಅಡುಗೆ ಮನೆ ಕೆಲಸದವಳ ಕೈವಾಡ? ಬಾಗಪ್ಪ ಹರಿಜನ್ ಪುತ್ರಿಯರು ಹೇಳಿದ್ದಿಷ್ಟು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

