‘ಮಜಾ ಟಾಕೀಸ್’ನಲ್ಲಿ ಪ್ರೇಮಿಗಳು; ಈ ಬಾರಿ ಮತ್ತಷ್ಟು ಮನರಂಜನೆ ಪಕ್ಕಾ
ಮಜಾ ಟಾಕೀಸ್ನಲ್ಲಿ ಹೊಸ ಎಪಿಸೋಡ್ ಪ್ರಸಾರಕ್ಕೆ ಕ್ಷಣಗಣನೆ ಆರಂಭ ಆಗಿದೆ. ಪ್ರತಿ ವಾರ ಹೊಸ ಹೊಸ ಅತಿಥಿಗಳು ಬರುತ್ತಾರೆ. ಈ ಬಾರಿ ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಸಖತ್ ಭಿನ್ನವಾದ ಕಾನ್ಸೆಪ್ಟ್ನೊಂದಿಗೆ ಶೋ ಆರಂಭ ಆಗುತ್ತಿದೆ. ಆ ಬಗ್ಗೆ ಇಲ್ಲಿ ಇದೆ ವಿವರ.
ಸೃಜನ್ ಲೋಕೇಶ್ ನಡೆಸಿಕೊಡೋ ‘ಮಜಾ ಟಾಕೀಸ್’ನಲ್ಲಿ ಈ ಬಾರಿ ಮತ್ತಷ್ಟು ಮನರಂಜನೆ ಸಿಗೋದು ಪಕ್ಕಾ ಆಗಿದೆ. ಪ್ರೇಮಿಗಳ ದಿನದ ಪ್ರಯುಕ್ತ ಈ ಶನಿವಾರದ ಎಪಿಸೋಡ್ಗೆ ನಾಗಭೂಷಣ್ ಹಾಗೂ ಅವರ ಪತ್ನಿ, ವಾಸುಕಿ ವೈಭನ್ ಹಾಗೂ ಅವರ ಪತ್ನಿ ಆಗಮಿಸಿದ್ದಾರೆ. ಇವರು ಪ್ರೀತಿಸಿ ಮದುವೆ ಆದವರು. ಹೀಗಾಗಿ, ಈ ಸಂಪೂರ್ಣ ಎಪಿಸೋಡ್ ಪೂರ್ತಿಯಾಗಿ ಫನ್ ರೂಪದಲ್ಲಿ ಸಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.