ಪತಿಯಿಂದಲೇ ಕೊಲೆಯಾದ ‘ಭಜರಂಗಿ’ ನಟಿ; ಆಸ್ತಿ ಹೊಡೆಯಲು ನಡೆದಿತ್ತು ಪ್ಲ್ಯಾನ್

ಪತಿಯಿಂದಲೇ ಕೊಲೆಯಾದ ‘ಭಜರಂಗಿ’ ನಟಿ; ಆಸ್ತಿ ಹೊಡೆಯಲು ನಡೆದಿತ್ತು ಪ್ಲ್ಯಾನ್

ರಾಜೇಶ್ ದುಗ್ಗುಮನೆ
|

Updated on: May 22, 2024 | 8:41 AM

‘ಭಜರಂಗಿ’ ಚಿತ್ರದಲ್ಲಿ ನಟಿಸಿದ್ದ ವಿದ್ಯಾ ಕೊಲೆಯಾಗಿದ್ದಾರೆ. ಅವರ ಪತಿ ನಂದೀಶ್ ಈ ಕೊಲೆ ಮಾಡಿದ್ದಾನೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಅಷ್ಟಕ್ಕೂ ವಿದ್ಯಾ ಕೊಲೆ ಆಗಲು ಕಾರಣ ಏನು ಎಂಬ ಪ್ರಶ್ನೆ ಮೂಡೋದು ಸಹಜ. ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿದೆ ಎಂದು ವಿದ್ಯಾ ತಾಯಿ ಆರೋಪ ಮಾಡಿದ್ದಾರೆ

‘ಭಜರಂಗಿ’, ‘ಜೈ ಮಾರುತಿ 800’, ‘ವೇದ’, ‘ಅಜಿತ್’ ಸೇರಿ ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿದ್ದ ವಿದ್ಯಾ ಕೊಲೆಯಾಗಿದ್ದಾರೆ. ಅವರ ಪತಿ ನಂದೀಶ್ (Nandish) ಈ ಕೊಲೆ ಮಾಡಿದ್ದಾನೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಅಷ್ಟಕ್ಕೂ ವಿದ್ಯಾ ಕೊಲೆ ಆಗಲು ಕಾರಣ ಏನು ಎಂಬ ಪ್ರಶ್ನೆ ಮೂಡೋದು ಸಹಜ. ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿದೆ ಎಂದು ವಿದ್ಯಾ ತಾಯಿ ಆರೋಪ ಮಾಡಿದ್ದಾರೆ. ‘ಅವನು (ನಂದೀಶ್) 15 ದಿನ ನಮ್ಮನೆಯಲ್ಲೇ ಇದ್ದ. ನಿನ್ನೆ ನಮ್ಮನೆಯಿಂದ ಹೋದ. ಫೋನ್​ನಲ್ಲಿ ಕೆಟ್ಟದಾಗಿ ಮಾತನಾಡಿದ. ಕೆಲ ವರ್ಷಗಳ ಹಿಂದೆ ನನ್ನ ಯಜಮಾನರು ತೀರಿ ಹೋದರು. ಆಗ ಒಂದು ವರ್ಷದ ಒಳಗೆ ಮಗಳ ಮದುವೆ ಮಾಡಬೇಕು ಎಂದುಕೊಂಡೆವು. ಈ ವೇಳೆ ಸಿಕ್ಕವನು ಇವನು. ನಮಗೆ ಗಂಡು ದಿಕ್ಕಿಲ್ಲ, ಹೇಳಿದಂತೆ ಕೇಳಿಸಬಹುದು ಅನ್ನೋದು ಅವನ ಪ್ಲ್ಯಾನ್ ಆಗಿತ್ತು.  ಹೀಗಾಗಿ, ನನ್ನ ಮಗಳನ್ನು ಆಸ್ತಿಗೋಸ್ಕರ ಮದುವೆ ಆದ’ ಎಂದಿದ್ದಾರೆ ವಿದ್ಯಾ ತಾಯಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.