ಭಾರತಿ ವಿಷ್ಣುವರ್ಧನ್ ಆರೋಗ್ಯ ಹೇಗಿದೆ? ಅಪ್​ಡೇಟ್ ಕೊಟ್ಟ ಅನಿರುದ್ಧ್

|

Updated on: Mar 07, 2024 | 11:44 AM

ಭಾರತಿ ವಿಷ್ಣುವರ್ಧನ್ ಅವರಿಗೆ ಈಗ 73 ವರ್ಷ ವಯಸ್ಸು. ಇತ್ತೀಚೆಗೆ ಅವರಿಗೆ ಅನಾರೋಗ್ಯ ಕಾಡಿತ್ತು. ಅವರಿಗೆ ತೀವ್ರ ಮಂಡಿನೋವು ಉಂಟಾಗಿತ್ತು. ಈಗ ಭಾರತಿ ಅವರ ಆರೋಗ್ಯ ಹೇಗಿದೆ ಎನ್ನುವ ಬಗ್ಗೆ ಅವರ ಅಳಿಯ ಅನಿರುದ್ಧ ಜತ್ಕರ್ ಅವರು ಮಾಹಿತಿ ನೀಡಿದ್ದಾರೆ. ‘

ಭಾರತಿ ವಿಷ್ಣುವರ್ಧನ್ (Bharathi Vishnuvardhan) ಅವರಿಗೆ ಈಗ 73 ವರ್ಷ ವಯಸ್ಸು. ಇತ್ತೀಚೆಗೆ ಅವರಿಗೆ ಅನಾರೋಗ್ಯ ಕಾಡಿತ್ತು. ಅವರಿಗೆ ತೀವ್ರ ಮಂಡಿನೋವು ಉಂಟಾಗಿತ್ತು. ಈಗ ಭಾರತಿ ಅವರ ಆರೋಗ್ಯ ಹೇಗಿದೆ ಎನ್ನುವ ಬಗ್ಗೆ ಅವರ ಅಳಿಯ ಅನಿರುದ್ಧ ಜತ್ಕರ್ ಅವರು ಮಾಹಿತಿ ನೀಡಿದ್ದಾರೆ. ‘ಅವರ ಆರೋಗ್ಯ ಚೆನ್ನಾಗಿದೆ. ನಡೆದಾಡುತ್ತಾರೆ. ದೇವರ ಅನುಗ್ರಹ, ಜನರ ಹಾರೈಕೆಯಿಂದ ಚೆನ್ನಾಗಿದ್ದಾರೆ’ ಎಂದು ಹೇಳಿದ್ದಾರೆ ಅವರು. ಕೆಲವು ವಿವಾದಗಳಿಂದ ಅನಿರುದ್ಧ್ ಅವರು ಧಾರಾವಾಹಿಯಿಂದ ದೂರವೇ ಇದ್ದರು. ಈಗ ಉದಯ ಟಿವಿಯಲ್ಲಿ ಮಾರ್ಚ್ 11ರಿಂದ ಪ್ರಸಾರ ಕಾಣಲಿರುವ ‘ಸೂರ್ಯವಂಶ’ ಧಾರಾವಾಹಿ ಮೂಲಕ ಅವರು ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Mar 07, 2024 11:43 AM