ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಎಲ್ಲರಲ್ಲೂ ಸಾರ್ಥಕತೆಯ ಭಾವನೆ

Updated on: May 10, 2025 | 10:45 AM

‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ನಡೆಯುತ್ತಿದೆ. ಇಷ್ಟು ದಿನಗಳ ಕಾಲ ಈ ಶೋಗೆ ಇಂಡೋರ್ ಶೂಟ್ ನಡೆಯುತ್ತಿದ್ದುದು ಗೊತ್ತೇ ಇದೆ. ಈಗ ಈ ಶೋಗೆ ಹೊರಾಂಗಣ ಶೂಟ್ ಆಯೋಜನೆ ಮಾಡಲಾಗಿತ್ತು. ಯಲ್ಲಾಪುರದ ಕೆಳಾಸೆ ಭಾಗದಲ್ಲಿ ಶೂಟಿಂಗ್ ನಡೆದಿದೆ ಎಂಬುದು ವಿಶೇಷ .

‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ (Bharjari Bachelors Season 2) ತಂಡ ಉತ್ತರ ಕನ್ನಡದ ಯಲ್ಲಾಪುರದಲ್ಲಿ ಬೀಡು ಬಿಟ್ಟಿತ್ತು. ಇಷ್ಟು ದಿನ ಸಿಟಿಯಲ್ಲಿ ಹಾಯಾಗಿ ಇದ್ದ ಎಲ್ಲರೂ ಈಗ ಹಳ್ಳಿಯಲ್ಲಿ ಕಷ್ಟಪಡುವಂತೆ ಆಗಿದೆ. ಆದರೆ, ಹಳ್ಳಿಯ ಜೀವನವನ್ನು ಹತ್ತಿರದಿಂದ ಕಂಡ ಎಲ್ಲರಿಗೂ ಸಾರ್ಥಕ ಭಾವನೆ ಮೂಡಿದೆ. ಈ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ‘ಸಾರ್ಥಕ ಭಾವನೆ ಮೂಡಿತು’ ಎಂದು ಪ್ರತಾಪ್ ಹೇಳಿರುವುದನ್ನು ಪ್ರೋಮೋದಲ್ಲಿ ಕಾಣಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.