ಸಿದ್ದಿ ಸಮುದಾಯದ ಜೊತೆ ಸರಳತೆಯ ಪಾಠ ಕಲಿತ ‘ಭರ್ಜರಿ ಬ್ಯಾಚುಲರ್ಸ್’

Updated on: May 09, 2025 | 10:59 AM

‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ನಡೆಯುತ್ತಿದೆ. ಜೀ ಕನ್ನಡದಲ್ಲಿ ಈ ಶೋ ಪ್ರಸಾರ ಕಾಣುತ್ತಿದೆ. ಇಷ್ಟು ದಿನ ಒಳಾಂಗಣದಲ್ಲಿ ಶೋ ನಡೆಯುತ್ತಾ ಇತ್ತು. ಈಗ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಹಳ್ಳಿಗೆ ಹೋಗಿ ಶೂಟ್ ಮಾಡಿದೆ. ಈ ಸಂದರ್ಭದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ.

‘ಭರ್ಜರಿ ಬ್ಯಾಚುಲರ್ಸ್​ ಸೀಸನ್ 2’ (Bharjari Bachelors season 2) ಇಷ್ಟು ದಿನ ಒಳಂಗಾಣದಲ್ಲಿ ಶೂಟ್ ಆಗುತ್ತಿತ್ತು. ಆದರೆ, ಈ ಬಾರಿ ಇವರೆಲ್ಲರೂ ಹಳ್ಳಿ ಜೀವನಕ್ಕೆ ಒಗ್ಗಿಕೊಂಡಿದ್ದಾರೆ. ಹೌದು, ಯಲ್ಲಾಪುರದ ಹಳ್ಳಿಯೊಂದಕ್ಕೆ ತೆರಳಿ ಸಿದ್ದಿ ಸಮುದಾಯದವರ ಜೊತೆ ಜೀವನ ನಡೆಸಿದ್ದಾರೆ. ಇವರ ಜೊತೆ ರವಿಚಂದ್ರನ್ ಹಾಗೂ ರಚಿತಾ ರಾಮ್ ಕೂಡ ಇದ್ದರು. ಹಳ್ಳಿ ಜೀವನ ನಡೆಸಿ ಎಲ್ಲರೂ ಖುಷಿ ಆಗಿದ್ದಾರೆ. ಇದು ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ದಿನಗಳನ್ನು ನೆನಪಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.