Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ

ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ

ನಯನಾ ರಾಜೀವ್
|

Updated on: Sep 19, 2024 | 2:07 PM

ಯಾವುದೇ ಸಂದರ್ಭದಲ್ಲಿ ಬ್ಯಾಂಕ್ ಎಟಿಎಂಗಳಿಂದ ಹಣ ಬಿಡಿಸಿಕೊಂಡು ಬರುವಂತೆ, ಯಾವುದೇ ಘಳಿಗೆಯಲ್ಲಿ ರೇಷನ್ ಪಡೆಯಬಹುದಾದ ಧಾನ್ಯಗಳ ಎಟಿಎಂ ಗುಜರಾತ್​ನ ಭಾವ್​ನಗರದಲ್ಲಿ ಸ್ಥಾಪಿಸಲಾಗಿದೆ. ಈ ಮೂಲಕ, ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಅಳವಡಿಸಲಾಗಿರುವ ಮೊಟ್ಟಮೊದಲ ಧಾನ್ಯಗಳ ಎಟಿಎಂ ಅಳವಡಿಸಿದ ಹೆಗ್ಗಳಿಕೆ ಇದು ಪಾತ್ರವಾಗಿದೆ.

ಭಾವ್​ನಗರ ನಗರದ ಕರ್ಚಲಿಯಪರ ಪ್ರದೇಶದಲ್ಲಿ ಅನ್ನಪೂರ್ತಿ ಎಂಬ ಧಾನ್ಯ ಎಟಿಎಂ ಅನ್ನು ಸಚಿವ ನಿಮುಬೆನ್ ಬಂಬಾನಿಯಾ ಉದ್ಘಾಟಿಸಿದರು. 2,500 ಕೆಜಿ ಆಹಾರ ಧಾನ್ಯಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದ ಟ್ಯಾಂಕ್‌ಗಳನ್ನು ಹೊಂದಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಒಳಪಡುವವರು ದಿನದ ಯಾವುದೇ ಸಮಯದಲ್ಲಿ ಧಾನ್ಯ ಎಟಿಎಂ ಬೂತ್‌ಗೆ ಭೇಟಿ ನೀಡಬಹುದು.

ಅವರ ಪಡಿತರ ಚೀಟಿಗೆ ಪಂಚ್ ಮಾಡಬಹುದು, ಯಂತ್ರದಲ್ಲಿನ ಸ್ಕ್ಯಾನರ್ ಮೂಲಕ ತಮ್ಮ ಬೆರಳಚ್ಚು ಮೂಲಕ ಗುರುತನ್ನು ಸಾಬೀತುಪಡಿಸಬಹುದು ಮತ್ತು ಅವರ ಮಾಸಿಕ ಪಡಿತರವನ್ನು ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ