ಅಮ್ಮನ ನೋಡಲು ಖುಷಿಯಿಂದ ಓಡೋಡಿ ಬಂದ ದರ್ಶನ್

ಅಮ್ಮನ ನೋಡಲು ಖುಷಿಯಿಂದ ಓಡೋಡಿ ಬಂದ ದರ್ಶನ್

ರಾಜೇಶ್ ದುಗ್ಗುಮನೆ
|

Updated on: Sep 19, 2024 | 1:01 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ 100 ದಿನಗಳಾಗಿವೆ. ಈ 100 ದಿನಗಳಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಈ ಸಂದರ್ಭದಲ್ಲಿ ಅವರ ತಾಯಿ ಜೈಲಿಗೆ ಬಂದಿದ್ದು ಕಡಿಮೆ. ಇಂದು ದರ್ಶನ್ ಅವರನ್ನು ಮೀನಾ ಅವರು ಭೇಟಿ ಮಾಡಿ ಮಾತನಾಡಿದ್ದಾರೆ.

ನಟ ದರ್ಶನ್ ಅವರಿಗೆ ತಾಯಿ ಮೀನಾ ಅವರನ್ನು ಕಾಣದೇ ಸಾಕಷ್ಟು ಬೇಸರ ಆಗಿತ್ತು. ಇಂದು (ಸೆಪ್ಟೆಂಬರ್ 19) ಬಳ್ಳಾರಿಗೆ ಜೈಲಿಗೆ ಅವರ ತಾಯಿಯ ಆಗಮನ ಆಗಿದೆ. ತಾಯಿಯನ್ನು ಕಾಣಲು ದರ್ಶನ್ ಖುಷಿಯಿಂದ ಓಡೋಡಿ ಬಂದಿದ್ದಾರೆ. ಆ ಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ತಾಯಿಯನ್ನು ಕಂಡು ದರ್ಶನ್ ಸಖತ್ ಖುಷಿಪಟ್ಟಿದ್ದಾರೆ. ಮಗನಿಗಾಗಿ ವಿವಿಧ ತಿನಿಸುಗಳನ್ನು ಮೀನಾ ತಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.